ಸಾಗರ : ಕಳ್ಳನೊಬ್ಬ ಬಟ್ಟೆ ಅಂಗಡಿಯಲ್ಲಿ ಬಟ್ಟೆಯನ್ನು ಕದ್ದು ಪರಾರಿ ಆಗುತ್ತಿರುವುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಾಗರ ತಾಲೂಕಿನ ಆನಂದಪುರದ ಬಟ್ಟೆ ಅಂಗಡಿಯೊಂದರಲ್ಲಿ ಕಳ್ಳನೊಬ್ಬ ಮೊದಲಿಗೆ ತನಗೆ ಬೇಕಾದ ಬಟ್ಟೆಯನ್ನು ಖರೀದಿಸುತ್ತಾನೆ. ಹಣವನ್ನು ಸಹ ಪೇಟಿಎಂ ಮೂಲಕ ಪೇ ಮಾಡುತ್ತಾನೆ. ನಂತರ ಮಾಲೀಕ ಕಳ್ಳನು ಖರೀದಿಸಿದ ಬಟ್ಟೆಯ ಕವರನ್ನು ನೀಡುತ್ತಾನೆ. ಬಟ್ಟೆ ಅಂಗಡಿಯ ಮಾಲಿಕ ಇವನ ಜೊತೆ ವ್ಯವಹಾರ ಮುಗಿಯಿತೆಂದು ಇನ್ನೊಬ್ಬ ಗಿರಾಕಿಯ ಜೊತೆ ವ್ಯವಹಾರ ಮಾಡಲು ಹೋಗುತ್ತಾನೆ. ಆಗ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.
ಅಂಗಡಿಯ ಮಾಲೀಕ ಅತ್ತ ಹೋಗುತ್ತಿದ್ದಂತೆ, ಕಳ್ಳನು ಅಲ್ಲಿಯೇ ಇದ್ದ ಚಡ್ಡಿ ಒಂದನ್ನು ಎಗರಿಸಿ ಕವರಿನ ಒಳಗೆ ಹಾಕಿಕೊಂಡು ಪರಾರಿಯಾಗುತ್ತಾನೆ. ಈ ದೃಶ್ಯ ಬಟ್ಟೆ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ.
ಕಳ್ಳನ ಕೈಚಳಕದ ಸಂಪೂರ್ಣ ವಿಡಿಯೋ ಇಲ್ಲಿದೆ





