ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಅಕ್ಕ ಕ್ಯಾಂಟೀನ್ 15 ಲಕ್ಷದಲ್ಲಿ ನಿರ್ಮಾಣ ಮಾಡಲು ಆಗದಿದ್ದರೆ ದೇಣಿಗೆ ಎತ್ತಿ ಕಟ್ಟುತ್ತೇವೆ – ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು

On: October 12, 2026 10:33 AM
Follow Us:
---Advertisement---

ಅಕ್ಕ ಕ್ಯಾಂಟೀನ್ 15 ಲಕ್ಷದಲ್ಲಿ ನಿರ್ಮಾಣ ಮಾಡಲು ಆಗದಿದ್ದರೆ ದೇಣಿಗೆ ಎತ್ತಿ ಕಟ್ಟುತ್ತೇವೆ – ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು

ಸಾಗರ : ತಾಲೂಕಿನ ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಕ್ಕ ಕ್ಯಾಂಟೀನ್ ನ್ನು ಹೊಸದಾಗಿ 15 ಲಕ್ಷದಲ್ಲಿ ನಿರ್ಮಾಣ ಮಾಡಲು ಆಗದಿದ್ದರೆ, ದೇಣಿಗೆ ಎತ್ತಿ ನಾವು ಕಟ್ಟುತ್ತೇವೆ ಎಂದು ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಸವಾಲು ಹಾಕಿದರು.

ಸುದ್ದಿಯ ಸಂಪೂರ್ಣ ವಿಡಿಯೋ

ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, 15 ಲಕ್ಷದಲ್ಲಿ ನಿರ್ಮಾಣ ಮಾಡಲು ಸಾಧ್ಯವಾಗದೇ ಇರುವುದರಿಂದ ವೈದ್ಯರ ವಸತಿ ಗೃಹದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ ಎಂಬ ಕಾಂಗ್ರೆಸ್ ಮುಖಂಡರ ಮಾತಿಗೆ ತಿರುಗೇಟು ನೀಡಿದ ರತ್ನಾಕರ್, ಇದೇ ಸರ್ಕಾರದಲ್ಲಿ 1.5 ಲಕ್ಷದಲ್ಲಿ ಜನತಾ ಮನೆ ಕಟ್ಟಲಾಗುತ್ತಿದೆ. 15 ಲಕ್ಷದಲ್ಲಿ ಅಕ್ಕ ಕ್ಯಾಂಟೀನ್ ಕಟ್ಟಲು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ನನ್ನ ಹಣದ ಮೂಲವನ್ನ ಬಹಿರಂಗಪಡಿಸಲು ಸಿದ್ಧನಿದ್ದೇನೆ. ಕೃಷಿಯಿಂದ ಬಂದ ಆದಾಯದಿಂದ ಸಾರ್ವಜನಿಕರಿಗಾಗಿ ಖರ್ಚು ಮಾಡುತ್ತೇನೆ. ಆದರೆ ನಾಲ್ಕು ವರ್ಷಗಳ ಹಿಂದೆ ಚುನಾವಣಾ ಸಮಯದಲ್ಲಿ ಹಣವಿಲ್ಲ ಎಂದು ಕಣ್ಣೀರು ಹಾಕಿದ ಶಾಸಕರು ಈಗ ಆಸ್ತಿ ಖರೀದಿಸಲು ಹಣ ಎಲ್ಲಿಂದ ಬಂದಿದೆ. ಜೊತೆಗೆ ಬೆಂಬಲಿಗರ ಹಣದ ಮೂಲವನ್ನು ಪ್ರಚುರ ಪಡಿಸಬೇಕು ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ವಂಚಕರಿದ್ದಾರೆ. ಕಾಗೋಡು ತಿಮ್ಮಪ್ಪ ಸನ್ಮಾನ ಕಾರ್ಯಕ್ರಮದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಣೆ ಮಾಡಿ, 250 ಸೇರಿಸಲು ಆಗದೆ ಹಣವನ್ನು ಲೂಟಿ ಮಾಡಿದ ಲೆಕ್ಕವನ್ನು ಇಂದಿಗೂ ಸಹ ನೀಡಿಲ್ಲ ಎಂದು ಆರೋಪ ಮಾಡಿದರು.

ಪತ್ರಕರ್ತ ಬಿ.ಡಿ ರವಿಕುಮಾರ್ ವಿರುದ್ಧ ಮಾತನಾಡುವ ಮೊದಲು ನೀವು ಕಾಡಿನಲ್ಲಿ ಜಂಬಿಟ್ಟಿಗೆ ಕ್ವಾರೆ ಮಾಡಿದಾಗ ಹಾಗೂ ಅಕ್ರಮವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಾಗ ಅಲ್ಲಿರುವ ಮರಗಳನ್ನು ಏನು ಮಾಡಿದರು ಸಾಗರ ನಾಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹೋರಾಟದ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಭರವಸೆ ನೀಡಿದ ನಂತರವೂ ಅಕ್ಕ ಕ್ಯಾಂಟೀನ್ ನನ್ನು ವೈದ್ಯರ ವಸತಿ ಗೃಹದಲ್ಲಿ ನಿರ್ಮಾಣ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ರೇವಪ್ಪ ಹೊಸಕೊಪ್ಪ ಮಾತನಾಡಿ, ಆಡಳಿತ ಪಕ್ಷದವರು ತಪ್ಪು ಮಾಡಿದಾಗ ವಿರೋಧಿಸುವುದು ಸಹಜ. ಆದರೆ ಸೋಮಶೇಖರ್ ಲ್ಯಾವಿಗೆರೆ ಅವರು ಸಮಾಜ ಸೇವಕರು, ದಾನಿಗಳಾದಂತಹ ರತ್ನಾಕರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದು ಸರಿಯಲ್ಲ. ಇದೇ ರೀತಿ ತೇಜೋವಧೆ ಮುಂದುವರೆದರೆ ಆನಂದಪುರದಲ್ಲಿ ತಲೆ ಎತ್ತಿ ನಡಿಯಲು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪಗೌಡ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಗುರುರಾಜ್, ಪ್ರಮುಖರಾದ ಚೌಡಪ್ಪ, ಮೋಹನ್ ಕಾಲೋನಿ, ರೇವಣಯ್ಯ, ದೇವರಾಜ್ ವರದಮೂಲ ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

Leave a Comment