ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಅ. 17ರಂದು ಆನಂದಪುರದಲ್ಲಿ ಪ್ರಜಾ ಸೇವೆ ಆಂದೋಲನ 

On: October 15, 2026 12:51 PM
Follow Us:
---Advertisement---

ಅ. 17ರಂದು ಆನಂದಪುರದಲ್ಲಿ ಪ್ರಜಾ ಸೇವೆ ಆಂದೋಲನ

ಆನಂದಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಅಕ್ಟೋಬರ್ 17. ರಂದು ಆನಂದಪುರದ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಹೇಳಿದರು.

ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಹೋಬಳಿ ಮಟ್ಟದಲ್ಲಿ ಪ್ರಥಮ ಬಾರಿಗೆ ಆನಂದಪುರದಲ್ಲಿ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆನಂದಪುರ ಹೋಬಳಿ ಮಟ್ಟದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲು ಹಾಗೂ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಬರೆದು ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಆಂದೋಲನದಲ್ಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಈ ಎಲ್ಲಾ ಅಧಿಕಾರಿಗಳ ಮುಂದೆಯೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಈ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸರ್ಕಾರದ ಸೇವೆಗಳು ಜನರ ಮನೆಯ ಬಾಗಿಲಿಗೆ ಹೋಗಬೇಕು ಎನ್ನುವ ಉದ್ದೇಶದಿಂದ ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಈಗಾಗಲೇ ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯಶಸ್ವಿಯಾಗಿ ನಡೆದ ನಂತರ ಹೋಬಳಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಯೋಜನೆಯನ್ನು ಅನಂದಪುರ ಹೋಬಳಿ ಮಟ್ಟದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ, ಮುಖಂಡರಾದ ನಜರುಲ್ಲಾ ಖಾನ್, ಖಲೀಮುಲ್ಲಾ, ರಮಾನಂದ, ಲಿಂಗರಾಜ್, ಬಸವರಾಜ್, ಉಮೇಶ್ ಎನ್, ಅಬ್ದುಲ್ ರಜಾಕ್, ಆನಂದ ಹರಟೆ, ಅಶ್ವಿನ್, ಕಿರಣ್ ದೊಡ್ಮನೆ, ಆಸಿಫ್, ಈಶ್ವರ್ ಉಪಸ್ಥಿತರಿದ್ದರು.

ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಪ್ರಜಾ ಸೇವೆ ಆಂದೋಲನ – ಸ್ಥಳದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು 

ಅಕ್ಕ ಕ್ಯಾಂಟೀನ್ 15 ಲಕ್ಷದಲ್ಲಿ ನಿರ್ಮಾಣ ಮಾಡಲು ಆಗದಿದ್ದರೆ ದೇಣಿಗೆ ಎತ್ತಿ ಕಟ್ಟುತ್ತೇವೆ – ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು

ಅನುಪಯುಕ್ತ ಕಟ್ಟಡದಲ್ಲಿ ಅಕ್ಕ ಕ್ಯಾಂಟೀನ್ ತೆರೆಯಲು ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಮುಖಂಡರು 

ಆನಂದಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವಸತಿ ಗೃಹದಲ್ಲಿ ಅಕ್ಕ ಕ್ಯಾಂಟೀನ್ ವಿರೋಧಿಸಿ ಅಹೋರಾತ್ರಿ ಧರಣಿ

ಭವಿಷ್ಯದ ಹಿತದೃಷ್ಟಿಯಿಂದ ಅರಣ್ಯ ಹಾಗೂ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು – ಕುಲಪತಿ ಡಾ. ಎಂ ವಿ ಧನಂಜಯ್

ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ : ಮುಖ್ಯಮಂತ್ರಿಗೆ ಯುವಕನ ವಿಶೇಷ ಪತ್ರ 

Leave a Comment