ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಎಸ್ ಎಸ್ ಎಲ್ ಸಿ ಪರೀಕ್ಷೆ – ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಪೂರ್ವ ವಿ ಪಾಟೀಲ್. Creative international school student Purva v patil who got first place in SSLC examination.

On: April 23, 2026 12:18 PM
Follow Us:
---Advertisement---

ಸಾಗರ:  2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಸಾಗರ ತಾಲೂಕಿಗೆ ಎರಡನೇ ಸ್ಥಾನ ಬಂದಿದ್ದು ಒಟ್ಟು 2919 ವಿದ್ಯಾರ್ಥಿಗಲ್ಲಿ 1489ಗಂಡು, 1430 ಹೆಣ್ಣು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ 2890 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 1472ಗಂಡು ಹಾಗೂ 1420 ಹೆಣ್ಣು ಉತ್ತೀರ್ಣರಾಗಿದ್ದು ತಾಲ್ಲೂಕಿನಲ್ಲಿ ಕೇವಲ 27 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿರುತ್ತಾರೆ.

 

ಈ ವರ್ಷ ಫಲಿತಾಂಶ 99.36% ದಾಖಲಾಗಿದ್ದು ಕಳೆದ ಬಾರಿಯ ಫಲಿತಾಂಶ 92 ಬಂದಿದ್ದು ಶೇಖಡ 7% ಹೆಚ್ಚಾಗಿರುತ್ತದೆ.

ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗೆ ಪ್ರಥಮ ಸ್ಥಾನ 

ಕ್ರಿಯೇಟಿವ್ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಆಚಾಪುರ 2025-26ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು,ಅದರಲ್ಲಿ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು ಇನ್ನುಳಿದ ಏಳು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಪೂರ್ವ ವಿ ಪಾಟೀಲ್ 625ಕ್ಕೆ 620 ಅಂಕವನ್ನು ಗಳಿಸಿದ್ದು ಹಾಗೂ ಸಂಜನಾ ಡಿ ಸಿ 625ಕ್ಕೆ 614 ಅಂಕಗಳನ್ನು ಗಳಿಸಿರುತ್ತಾರೆ. ಸಾರಿಕಾ ಆರ್ ಭಟ್ 625 ಕ್ಕೆ 608 ಮತ್ತು ಹನಿ ಕೆ ಆರ್ 625ಕ್ಕೆ 608 ಗಳಿಸಿರುತ್ತಾರೆ. ಸಾಧನೆಗೈದ ಆತ್ಮೀಯ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಪರವಾಗಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಗಳು.

 

ಶೇಕಡ ನೂರರಷ್ಟು ಫಲಿತಾಂಶ ಬಂದ ಶಾಲೆಗಳು: 

ಸರ್ಕಾರಿ ಪ್ರೌಢಶಾಲೆಗಳು : 21ರಲ್ಲಿ 11 ಶಾಲೆಗಳು ನೂರು ಫಲಿತಾಂಶ ದಾಖಲಿಸಿವೆ, ಆರ್.ಎಂ.ಎಸ್.ಎ ಉರ್ದು, ಬರೂರು, ಆವಿನಹಳ್ಳಿ, ನಾಗವಳ್ಳಿ, ಬಿಳಿಗಾರು, ಹುಲಿದೇವರಬನ, ಕಾನ್ಲೆ, ತಡಗಳಲೆ, ಬ್ಯಾಕೋಡು, ಎಂ.ಎಲ್.ಹಳ್ಳಿ, ಉಳ್ಳೂರು.

ಸರ್ಕಾರಿ ವಸತಿ ಶಾಲೆಗಳು: 7 

 

ವಸತಿ ಶಾಲೆಗಳಲ್ಲಿ 7 ಶಾಲೆಗಳು ಶೇ. 100 ಫಲಿತಾಂಶ ಬಂದಿವೆ. ವಸತಿ ಶಾಲೆಗಳು : ಮೌಲನಾ ಆಜಾದ್, ಅಟಲ್ ಬಿಹಾರಿ ವಾಜಿಪೇಯಿ ವಸತಿ ಶಾಲೆ ಆವಿನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಆವಿನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ತಾಳಗುಪ್ಪ, ಮುರಾರ್ಜಿ ವಸತಿ ಶಾಲೆ ಕೆಳದಿ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಯಡೆಹಳ್ಳಿ, ಇಂದಿರಾಗಾಂಧಿ ವಸತಿ ಶಾಲೆ ತುಮರಿ.

ಅನುದಾನಿತ ಪ್ರೌಢಶಾಲೆಗಳು: 16 ಶಾಲೆಗಳಲ್ಲಿ 14 ಶಾಲೆಗಳು ನೂರರಷ್ಟು ಫಲಿತಾಂಶ ದಾಖಲಿಸಿದೆ. ನಿರ್ಮಲಾ ಬಾಲಿಕಾ ಪ್ರೌಢಶಾಲೆ, ಹಾಜಿ ಕೋಯಾ, ಹೆಚ್.ಶಿವಲಿಂಗಪ್ಪ, ಎಂ.ಜಿ.ಎನ್,ಪೈ ಪ್ರೌಢಶಾಲೆ, ಜ್ಞಾನ ಸಹ್ಯಾದ್ರಿ ಯಡೇಹಳ್ಳಿ, ಎಸ್.ವಿ.ವಿ.ತ್ಯಾಗರ್ತಿ, ನಲಂದ ಪ್ರೌಢಶಾಲೆ ತಾಳಗುಪ್ಪ, ವಿ.ಸಂ.ಪ್ರೌಢಶಾಲೆ. ಕೇಡಲಸರ, ಸೆಂಟ್ ಆಂತೋನಿ ಇಡುವಳ್ಳಿ, ಮಲೆನಾಡು ಪ್ರೌಢಶಾಲೆ ಗೌತಮಪುರ, ಇಕ್ಕೇರಿ ಪ್ರೌಢಶಾಲೆ ಯಡಜಿಳಮನೆ, ಕೆ.ವಿ.ಎನ್.ಎನ್. ಜೋಗ್, ಚನ್ನಮ್ಮಾಜಿ ಐಗಿನಬೈಲು, ಶಾಂತವೇರಿ ಗೋಪಾಲಗೌಡ ಸೈದೂರು, 

 

ಅನುದಾನರಹಿತ ಶಾಲೆಗಳು: 14 ಶಾಲೆಗಳಲ್ಲಿ 13 ಶಾಲೆಗಳು ಶೇಕಡ ನೂರರಷ್ಟು ಫಲಿತಾಂಶ ಬಂದಿರುತ್ತದೆ. ಸೇವಾಸಾಗರ, ರಾಭಿಯಾ ಆಂಗ್ಲಮಾಧ್ಯಮ, ಆಯುಷ್ಯ ಐಡ್ರೋಸ್, ಪ್ರಜ್ಞಾ ಭಾರತಿ, ರಾಮಕೃಷ್ಣ ವಸತಿ ಶಾಲೆ ಎಂ.ಎಲ್.ಹಳ್ಳಿ, ಕೊಡಚಾದ್ರಿ ಪ್ರೌಢಶಾಲೆ ಗಿಣಿವಾರ, ಪ್ರಗತಿ ಸಂಯುಕ್ತ ಪ್ರೌಢಶಾಲೆ, ರಾಭಿಯಾ ಪಬ್ಲಿಕ್ ಶಾಲೆ, ರಾಮಕೃಷ್ಣ ಪ್ರೌಢಶಾಲೆ ಸಾಗರ, ಸಾಧನಾ ವಿದ್ಯಾ ಕೇಂದ್ರ ಆನಂದಪುರ, ವಿದ್ಯಾಭಾರತಿ ಗೌತಮಪುರ, ಕ್ರಿಯೇಟೀವ್ ಇಂಟರ್ ನ್ಯಾಷನಲ್ ಸ್ಕೂಲ್ ಆಚಾಪುರ, ಸಂತ ಜೋಸೆಫ್ ಮಂಕಳಲೆ .

ತಾಲ್ಲೂಕಿನ ಟಾಪ್ ವಿದ್ಯಾರ್ಥಿಗಳು:

ಪೂರ್ವ ಪಟೇಲ್ ಕ್ರಿಯೆಟೀವ್ ಇಂಟರ್ ನ್ಯಾಷನಲ್ ಸ್ಕೂಲ್, ಆಚಾಪುರ, 620 ಅಂಕ, ಪ್ರಣವ್ ಕೆ.ಪಿ ರಾಮಕೃಷ್ಣ ವಿದ್ಯಾಲಯ ಸಾಗರ 619, ಶ್ರೇಯಾ ಪಿ ರಾಮಕೃಷ್ಣ ವಿದ್ಯಾಲಯ ಸಾಗರ 618, ಅಂಕಿತಾ ಬಿ.ಬಿ. ಎಂ.ಜಿ.ಎನ್. ಪೈ ಪ್ರೌಢಶಾಲೆ ಸಾಗರ 617, ಕೆವಿನ್ ಸೆಂಟ್ ಜೊಸೇಪ್ ಮಂಕಳಲೆ 917,ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಪಡೆದು ಟಾಪ್ ಆಗಿ ಹೊರ ಹೊಮ್ಮಿದ್ದಾರೆ.

 

ಸರ್ಕಾರಿ ಪ್ರೌಢಶಾಲೆಗಳಲ್ಲಿ: ಸಪಪೂಕಾಲೇಜು ಪ್ರೌಢಶಾಲೆ,ಸಾಗರ 95%, ಸುಭಾಷ್‌ನಗರ 97%, ಸಿರಿವಂತೆ 99%, ಕಾರ್ಗಲ್ 97%, ಕಟ್ಟಿನಕಾರು 97%, ತುಮರಿ 93%, ಮಾಸೂರು 97%, ಹಿರೇನೆಲ್ಲೂರು 97%, ತ್ಯಾಗರ್ತಿ 94%, ಕೆ.ಪಿ.ಎಸ್.ಆನಂದಪುರ 97%, ಹಿರೇನೆಲ್ಲೂರು 97%.

ಅನುದಾನಿತ ಶಾಲೆಗಳಲ್ಲಿ : ಭಾರತಿ ಪ್ರೌಢಶಾಲೆ ಕೆಳದಿ 97%, ಎಸ್.ಜೆ.ಜಿ ಪ್ರೌಢಶಾಲೆ ಮುರುಘಾಮಠ 97%,

ಅನುದಾನರಹಿತ ಪ್ರೌಢಶಾಲೆ: ಸಿಗಂದೂರೇಶ್ವರಿ ಉಳ್ಳೂರು 90%

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಅಭಿನಂದನೆ:

 ಸಾಗರ ತಾಲ್ಲೂಕು ಶೈಕ್ಷಣಿಕವಾಗಿ ಉತ್ತಮವಾದ ವಾತಾವರಣವಿದ್ದು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಲಾಗಿದೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶೇಕಡ ನೂರರಷ್ಟು ಫಲಿತಾಂಶ ಪಡೆದ ಶಾಲೆಗಳಿಗೆ ಹಾಗೂ ಉತ್ತಮವಾದ ಫಲಿತಾಂಶಕ್ಕೆ ಶ್ರಮಿಸಿದ ವಿದ್ಯಾರ್ಥಿಗಳಿಗೆ  ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅಭಿನಂದನೆ ತಿಳಿಸಿದ್ಧಾರೆ.

 

ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು, ಆಡಳಿತ ಮಂಡಳಿಯವರು, ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯವರು, ಪೋಷಕರು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಬಿಇಓ ಸದಾನಂದಸ್ವಾಮಿ ಸಿ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment