ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

SSLC : ನಿರಂತರ ಶ್ರಮದಿಂದ ಸಾಧನೆ ಸಾಧ್ಯ: ಬಿಇಓ ಸದಾನಂದ ಸ್ವಾಮಿ ಸಿ

On: April 26, 2026 5:46 AM
Follow Us:
---Advertisement---

ಸಾಗರ : ಸತತ ಪರಿಶ್ರಮದಿಂದ ಸಾಧನೆ ಸಾಧ್ಯ ಎಂದು ಬಿಇಓ ಸದಾನಂದ ಸ್ವಾಮಿ ಸಿ ಹೇಳಿದರು.

ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಪ್ರಥಮ ಸ್ಥಾನವನ್ನು ಪಡೆದ ಆಚಾಪುರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಪೂರ್ವ ವಿ ಪಾಟೀಲ್ ಅವರಿಗೆ ಅವರ ನಿವಾಸದಲ್ಲಿ ಇಲಾಖೆ ವತಿಯಿಂದ ಅಭಿನಂದಿಸಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.Purva sslc

ಆರಂಭದಲ್ಲಿ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ಆದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಮನೆಗಳಲ್ಲಿ ಉತ್ತಮವಾದ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ. ಪ್ರತಿಭೆ ಯಾರ ಸ್ವತ್ತು ಅಲ್ಲ ಪರಿಶ್ರಮ ತುಂಬಾ ಅಗತ್ಯವಾಗಿದೆ.

ಸಾಗರ ತಾಲೂಕು ಶೈಕ್ಷಣಿಕವಾಗಿ ಉತ್ತಮವಾಗಿದೆ. ವಿದ್ಯಾರ್ಥಿಗಳ ಶಿಕ್ಷಕರ ಪೋಷಕರ ಶ್ರಮ ಜನಪ್ರತಿನಿಧಿಗಳ ಪ್ರೋತ್ಸಾಹ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಿಂದ ತಾಲೂಕಿನಲ್ಲಿ 58 ಶಾಲೆಗಳಲ್ಲಿ 45 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದ್ದು ವಿಶೇಷವಾಗಿದೆ. ಇದು ತಾಲೂಕಿನ ಶೈಕ್ಷಣಿಕ ಗುಣಾತ್ಮಕತೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಪಿಇಓ ರಮೇಶ್, ಶಿಕ್ಷಣ ಸಂಯೋಜಕರಾದ ದಿನೇಶ್ ಕುಮಾರ್, ಕುಮಾರ್ ಸ್ವಾಮಿ ಹಾಗೂ  ಪೋಷಕರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

Leave a Comment