ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಪಿಎಸ್ಐ ಪ್ರವೀಣ್ ಎಸ್.ಪಿ ಅವರಿಂದ ಗ್ರಾಮ ವಾಸ್ತವ್ಯ. Village stay by PSI Praveen S.P

On: March 1, 2026 2:30 PM
Follow Us:
---Advertisement---

ಸಾಗರ : ತಾಲೂಕಿನ ಆನಂದಪುರ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ಎಸ್ ಪಿ ಅವರು ಕಾರೆಹೊಂಡ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಸಾಮಾಜಿಕ ಬದಲಾವಣೆ ಹಾಗೂ ಅರಿವು ಕಾರ್ಯಕ್ರಮ ಮೂಡಿಸಿದರು.

ಸಾಗರ ಉಪವಿಭಾಗದ ಎಎಸ್‌ಪಿ ಬೆನಕ ಪ್ರಸಾದ್ ಹಾಗೂ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಕಾರೆಹೊಂಡ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಮಿಷನ್ ಸುರಕ್ಷಾ ಯೋಜನೆಯಡಿಯಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು.

ಪ್ರಸ್ತುತ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯ, ಮಕ್ಕಳ ಬೆಳವಣಿಗೆ ಯಾವ ರೀತಿ ಆಗಬೇಕು, ಮಕ್ಕಳ ಬೆಳವಣಿಗೆ ಹಾಗೂ ಶಿಕ್ಷಣದಲ್ಲಿ ಪೋಷಕರ ಪಾತ್ರವೇನು, ಮಕ್ಕಳು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಕ್ರೀಡೆಯಿಂದ ಆಗುವ ಪ್ರಯೋಜನಗಳೇನು, ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಯಾವ ಯಾವ ಮಾರ್ಗದರ್ಶನಗಳನ್ನು ಅನುಸರಿಸಬೇಕು ಎಂಬುದನ್ನ ಪೋಷಕರಿಗೆ ಹಾಗೂ ಮಕ್ಕಳಿಗೆ ತಿಳಿ ಹೇಳಿದರು.karehonda

ಪೋಷಕರು ಯಾವುದೇ ಸಂದರ್ಭದಲ್ಲಿಯೂ ಸಹ ಮಕ್ಕಳ ಕೈಯಲ್ಲಿ ಮದ್ಯಪಾನ ಹಾಗೂ ತಂಬಾಕು ಉತ್ಪನ್ನಗಳನ್ನು ತರಿಸಬಾರದೆಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ನಂತರ ಗ್ರಾಮದ ಯುವಕರೊಂದಿಗೆ ಕ್ರಿಕೆಟ್ ಪಂದ್ಯಾವಳಿ ಆಡುವ ಮೂಲಕ ಯುವಕರು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸದೃಢರಾಗಬೇಕೆಂದು ಗ್ರಾಮದ ಯುವಕರಿಗೆ ಕರೆ ನೀಡಿದರು.cricket

ಈ ಸಂದರ್ಭದಲ್ಲಿ ಉಳ್ಳೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ತಿರುಮಲೇಶ್, ಹರೀಶ್, ಹುಚ್ಚರಾಯಪ್ಪ, ಹಾಗೂ ಆನಂದಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ ಎಸ್ ಐ ವೆಂಕಟೇಶ್, ನಿಂಗರಾಜ್, ಪ್ರಶಾಂತ್, ಶಶಿಕುಮಾರ್, ಉಮೇಶ್, ನೂತನ್, ಮಾಲತೇಶ್, ನಿರಂಜನ್, ಹರ್ಷ, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment