ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕಳಪೆ ಕಾಮಗಾರಿ : ಕೆಲಸ ನಿರ್ವಹಿಸದಂತೆ ತಡೆ : ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು

On: July 12, 2026 10:48 AM
Follow Us:
---Advertisement---

ಸಾಗರ : ತಾಲೂಕಿನ ಆನಂದಪುರ ಸಮೀಪದ ಯಡೆೇಹಳ್ಳಿ ವೃತ್ತದಲ್ಲಿ ಇತ್ತೀಚೆಗೆ ನಿರ್ಮಿಸಿರುವ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡೇಹಳ್ಳಿ ವೃತದಿಂದ ತೀರ್ಥಹಳ್ಳಿ ಹೋಗುವ ರಸ್ತೆಯಲ್ಲಿ ನಿರ್ಮಿಸಿರುವ ರಸ್ತೆ ವಿಭಜಕ, ಬಾಕ್ಸ್ ಚರಂಡಿ, ಚರಂಡಿಗೆ ನೀರು ಹೋಗಲು ಮಾಡಿರುವ ವ್ಯವಸ್ಥೆ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

yadehalli

 

ರಸ್ತೆಯ ಇಕ್ಕೆಲಗಳಲ್ಲಿ ಹಲವು ಮನೆಗಳಿದ್ದು, ಅವರ ಮನೆಗಳಿಗೆ ಹೋಗಲು ಗುತ್ತಿಗೆದಾರರು ಯಾವುದೇ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಟ್ಟಿಲ್ಲ. ರಸ್ತೆಯಿಂದ ಬಾಕ್ಸ್ ಚರಂಡಿ ಒಂದು ಅಡಿಗಿಂತ ಹೆಚ್ಚಿನ ಎತ್ತರ ಇರುವುದರಿಂದ ತಮ್ಮ ತಮ್ಮ ವಾಹನಗಳನ್ನು ರಸ್ತೆಯಲ್ಲಿ ಇಟ್ಟು ಮನೆಗೆ ಹೋಗುವಂಥ ಪರಿಸ್ಥಿತಿ ಉಂಟಾಗಿದೆ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಬೈಕ್ ಕಳೆದುಕೊಂಡ ಮನೆ ಮಾಲಿಕ

ಇತ್ತೀಚಿಗೆ  ಯಡೆೇಹಳ್ಳಿ ವೃತ್ತದಲ್ಲಿ ನಿರ್ಮಿಸಿರುವ ಕಾಮಗಾರಿಯು ಅತ್ಯಂತ ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಬೈಕ್ ಸವಾರರು ತಮ್ಮ ಬೈಕನ್ನು ಮನೆಯ ಬಾಗಿಲಿಗೆ ತೆಗೆದುಕೊಳ್ಳಲು ಹೋಗಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಇಟ್ಟು ಹೋಗಿರುವ ಪರಿಣಾಮವಾಗಿ ಬೈಕ್ ಕಳ್ಳತನವಾಗಿದೆ ಎಂದು ಗ್ರಾಹಕರು ತಮ್ಮ ಅಳನ್ನು ತೋಡಿಕೊಂಡಿದ್ದಾರೆ.

ವೈಜ್ಞಾನಿಕವಾದ ಕಾಮಗಾರಿ ಮಾಡಿ ಇಲ್ಲವೇ ಕೆಲಸ ನಿಲ್ಲಿಸಿ : ವಜೀರ್ ಯಡೇಹಳ್ಳಿ

   ಆವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆ ಮಾಲೀಕರು ತಮ್ಮ ತಮ್ಮ ಮನೆಗಳಿಗೆ ಹೋಗುವುದು ಸಹ ಅಸಾಧ್ಯವಾಗಿದೆ. ಮನೆಯಲ್ಲಿ ಡಯಾಲಿಸಿಸ್ ಹಾಗೂ ವಯಸ್ಸಾದವರು ಇದ್ದಾರೆ. ರಸ್ತೆಯಿಂದ ಒಂದರಿಂದ ಎರಡು ಅಡಿ ಎತ್ತರಕ್ಕೆ ಬಾಕ್ಸ್ ಚರಂಡಿ ಮಾಡಿದರೆ ಮನೆಗೆ ಹೋಗುವುದೇ ಹೇಗೆ, ವಯಸ್ಸಾದವರು ಅನಾರೋಗ್ಯದಿಂದ ಬಳಲುತ್ತಿದ್ದವರು ಮನೆಯಿಂದ ರಸ್ತೆಗೆ ಇಳಿಯುವುದು ಹೇಗೆ ವಜೀರ್  ಪ್ರಶ್ನೆ ಮಾಡಿದ್ದಾರೆ. 

ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲಸವನ್ನು ನಿರ್ವಹಿಸಿದಂತೆ ತಡೆ ಹಿಡಿದಿದ್ದೇವೆ. ಈ ವಿಷಯವಾಗಿ ಗುತ್ತಿಗೆದಾರರಿಗೆ ಇಂಜಿನಿಯರಿಗಳಿಗೆ ಕರೆ ಮಾಡಿದರೆ ಯಾವುದೇ ಉತ್ತರವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳಿನಿಂದ ಕಾಣೆಯಾದ ಗುತ್ತಿಗೆದಾರ : ಪ್ರಮೋದ್ ಕುಮಾರ್

ಬಾಕ್ಸ್ ಚರಂಡಿ ಕಾಮಗಾರಿ ಮುಗಿದು ಆರು ತಿಂಗಳು ಕಳೆದರೂ ಗುತ್ತಿಗೆದಾರ ಸೇರಿದಂತೆ ಯಾವುದೇ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ. ವ್ಯವಸ್ಥೆಗಳನ್ನು  ಸರಿಪಡಿಸುತ್ತೇವೆ ಹೇಳುತ್ತಾರೆ ವಿನಹ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪ್ರಮೋದ್ ಕುಮಾರ್  ಆಕ್ರೋಶ ವ್ಯಕ್ತಪಡಿಸಿದರು.

ಬಾಕ್ಸ್ ಚರಂಡಿ ಒಳಗೆ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಇದ್ದು, ಕೊಳಚೆ ನೀರು ಹೋಗದಂತ ಪರಿಸ್ಥಿತಿ ಉಂಟಾಗಿದೆ. ಮಣ್ಣನ್ನು ಸ್ವಚ್ಛ ಮಾಡದೆ ಬಾಕ್ಸ್ ಚರಂಡಿಯ ಮೇಲೆ ಸ್ಲ್ಯಾಬ್ ಗಳನ್ನು ಅಳವಡಿಸಲಾಗಿದೆ. ಇದು ಕೇವಲ ಸಾರ್ವಜನಿಕರ ದುಡ್ಡುನ್ನು  ಕೊಳ್ಳೆ ಹೊಡೆಯುವ ತಂತ್ರವಾಗಿದೆ ಎಂದು ಕಿಡಿ ಕಾರಿದರು.

ಅಪಘಾತದ ಸ್ಥಳವಾಗುತ್ತಿರುವ ಯಡೇಹಳ್ಳಿ ವೃತ್ತ

ಯಡೆೇಹಳ್ಳಿ ವೃತದಲ್ಲಿ ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಈ ನಾಲ್ಕು ದಿಕ್ಕುಗಳಿಂದ ವಾಹನಗಳು ಬಂದು ಇಲ್ಲಿ ಸೇರುವುದರಿಂದ ನಿರಂತರವಾಗಿ ಅಪಘಾತ ಸಂಭವಿಸುತ್ತಿರುತ್ತವೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಪಲಕಗಳನ್ನಾಗಲಿ ಅಳವಡಿಸಿಲ್ಲ. ಈ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಕೂಡಲೆ ಸರ್ಕಾರ ಗಮನ ಹರಿಸಬೇಕು. ತಡವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು  ಎಂದು ಎಚ್ಚರಿಕೆ ನೀಡಿದ್ದಾರೆ.

ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಹಿನ್ನಡೆ – ಅನಿಲ್ ಕುಮಾರ್

ರಸ್ತೆಯ ಇಕ್ಕೆಲಗಳಲ್ಲಿ ಇರುವ ಮನೆಗಳಿಗೆ  ವ್ಯವಸ್ಥಿತವಾಗಿ ಹೋಗಲು ರಾಂಪ್ ಗಳನ್ನು ನಿರ್ಮಿಸಿ ಕೊಡಲಾಗುವುದು. ನೀರು ಸರಾಗವಾಗಿ ಹೋಗಲು ಹೊಸದಾಗಿ ರಂದ್ರಗಳನ್ನು ಕೊರೆಯಲಾಗುವುದು.  ಗುತ್ತಿಗೆದಾರರಿಗೆ  ವ್ಯವಸ್ಥಿತವಾಗಿ ಕಾಮಗಾರಿ  ಮುಗಿಸಲು ಸೂಚನೆ ನೀಡಲಾಗಿದ್ದು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗದ ಕಾರಣ ಕೆಲಸಕ್ಕೆ ಹಿನ್ನಡೆಯಾಗಿದೆ. ಇನ್ನು 15 ದಿನದಲ್ಲಿ ವ್ಯವಸ್ಥಿತವಾಗಿ ಕಾಮಗಾರಿಯನ್ನು ಮುಗಿಸಲಾಗುವುದು. ಜುಲೈ 13 ರಂದು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್ ಕುಮಾರ್ ಭರವಸೆ ನೀಡಿದ್ದಾರೆ.

ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 

 

 

Join WhatsApp

Join Now

Join Telegram

Join Now

Leave a Comment