ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಅಕ್ರಮ ಗಾಂಜಾ ಬೆಳೆ : ಮಾಲು ಸಹಿತ ಆರೋಪಿಗಳ ಬಂಧನ.

On: August 15, 2026 6:21 AM
Follow Us:
---Advertisement---

ಅಕ್ರಮ ಗಾಂಜಾ ಬೆಳೆ : ಮಾಲು ಸಹಿತ ಆರೋಪಿಗಳ ಬಂಧನ

ಸಾಗರ : ತಾಲ್ಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಹಿನ್ನಲೆಯಲ್ಲಿ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧನ ಮಾಡಲಾಗಿದೆ.

ಗೌತಮಪುರ ಗ್ರಾಮದ ಬಸವರಾಜ್ ಹಾಗೂ ಕುಮಾರ  ಆರೋಪಿಗಳಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ್ ಎಂಬುವರನ್ನು ಬಂಧನ ಮಾಡಲಾಗಿದೆ.  ಗೌತಮಪುರ ಗ್ರಾಮದಲ್ಲಿ ಅಕ್ರಮ ಗಾಂಜಾ ಬೆಳೆದಿರುವ ಬಗ್ಗೆ ಮೇಲಾಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮನೆಯ ಹಿಂಭಾಗದ ತೋಟದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳ ಮನೆಯ ಹಿಂಭಾಗದ ತೋಟದಲ್ಲಿ ಬೆಳೆದಿದ್ದ 2.10 ಲಕ್ಷ ಬೆಲೆ ಬಾಳುವ 16400 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಹಾಯಕ ಪೊಲೀಸ್ ಅಧೀಕ್ಷಕರಾದ ಬೆನಕ ಪ್ರಸಾದ್ ಮಾರ್ಗದರ್ಶನದಲ್ಲಿ ಸಾಗರದ ವೃತ ಪೊಲೀಸ್ ನಿರೀಕ್ಷಕರಾದ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ,  ಸಬ್ ಇನ್ಸ್ಪೆಕ್ಟರ್ ಪ್ರವೀಣ್, ಎ ಎಸ್ ಐ ಹಾಲಪ್ಪ ಹಾಗೂ ಸಿಬ್ಬಂದಿಗಳಾದ ಪರಶುರಾಮ ಪ್ರಶಾಂತ್, ನಿರಂಜನ್, ನೂತನ್ ಸಂತೋಷ್, ಐ.ಟಿ ಸಂತೋಷ್, ಸುನಿಲ್, ಅಭಿಷೇಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment