ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ವಿದ್ಯುತ್ ಶಾಕ್ : ಮೂರು ಜಾನುವಾರುಗಳು ಸಾವು: ಪರಿಹಾರಕ್ಕೆ ಆಗ್ರಹ.

On: July 6, 2026 4:35 PM
Follow Us:
---Advertisement---

ಸಾಗರ : ವಿದ್ಯುತ್ ಶಾಕ್ ನಿಂದಾಗಿ ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಆನಂದಪುರ ಸಮೀಪದ ಮದ್ಲೆಸರ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಕಂಬದಲ್ಲಿರುವ ಇನ್ಸುಲೇಟರ್ ಒಡೆದು ವಿದ್ಯುತ್ ತಂತಿ ಕಂಬಕ್ಕೆ ತಾಗಿದ ಪರಿಣಾಮವಾಗಿ ಕಂಬದಲ್ಲಿ ವಿದ್ಯುತ್ ಸಂಚಾರವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಸುಗಳಿಗೆ ವಿದ್ಯುತ್ ಶಾಕ್ ಆಗಿದೆ. ವಿದ್ಯುತ್ ಶಾಕ್ ನಿಂದಾಗಿ ಸ್ಥಳದಲ್ಲೇ ಮೂರು ಹಸುಗಳು ಸಾವನ್ನಪ್ಪಿದ್ದಾವೆ. ಇನ್ನು ಕೆಲವು ಹಸುಗಳು ಅಪಾಯದಿಂದ ಪಾರಾಗಿವೆ.

ಸಮಯ ಪ್ರಜ್ಞೆ ಮೆರೆದ ನಾಗರಾಜ್

ಅದೇ ಮಾರ್ಗವಾಗಿ ಬಂದ ಮದ್ಲೆಸರ ಗ್ರಾಮದ ನಾಗರಾಜ್, ಹಸುಗಳು ಒದ್ದಾಡುತ್ತಿರುವುದನ್ನು ನೋಡಿ ತಕ್ಷಣ ವಿದ್ಯುತ್ ಇಲಾಖೆಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ತಿಳಿಸಿದ್ದಾರೆ. ತಕ್ಷಣವೇ ನಿಲ್ಲಿಸಲು ತಿಳಿಸಿದ ಪರಿಣಾಮವಾಗಿ ಹತ್ತಾರು ಹಸುಗಳ ಪ್ರಾಣ ಉಳಿದಿದೆ. ಕೇವಲ ಮೂರು ಹಸುಗಳು ಪ್ರಾಣ ಕಳೆದುಕೊಂಡಿದ್ದಾವೆ. ನಾಗರಾಜ್ ಅವರು ಮೈ ಮರೆತು ಹಸುವಿನ ಬಳಿ ಹೋಗಿದ್ದರೆ ಅವರ ಪ್ರಾಣಕ್ಕೂ ಕುತ್ತು ಬರುತ್ತಿತ್ತು.

ಪರಿಹಾರಕ್ಕೆ ಆಗ್ರಹ

ರೈತರು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಹಸುಗಳ ಸಾವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸಂಬಂಧಪಟ್ಟ ಇಲಾಖೆ ತಕ್ಷಣವೇ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಆಗ್ರಹಿಸಿದ್ದಾರೆ.

ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದ ವಿದ್ಯುತ್ ಇಲಾಖೆ

ವಿದ್ದುತ್ ಇಲಾಖೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ, ಮಳೆಗಾಲದ ಆರಂಭದ ಮೊದಲು ಸ್ಥಳೀಯರ ಸಹಾಯ ಪಡೆದು ಇಲಾಖೆಯು ವಿದ್ಯುತ್ ಮಾರ್ಗಗಳು ಯಾವ ಯಾವ ಸ್ಥಿತಿಯಲ್ಲಿದೆ ಎಂಬುದನ್ನ ಅವಲೋಕನ ಮಾಡಬೇಕಾಗಿತ್ತು. ಸರಿಯಾಗಿ ಗಮನಿಸಿದ್ದರೆ ಇಂದು ಹಸುಗಳು ಸಾಯುತ್ತಿರಲಿಲ್ಲ. ಇನ್ನು ಮುಂದಾದರೂ ಸಂಬಂಧಪಟ್ಟ ಇಲಾಖೆ ಈ ರೀತಿ ಘಟನೆ ಮರುಕಳಿಸಿದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ

Join WhatsApp

Join Now

Join Telegram

Join Now

Leave a Comment