ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತು ಕಳ್ಳತನ : ಮೂರು ಜನರ ಬಂಧನ. Theft of an ox tied up in a barn: Three people arrested

On: March 20, 2026 6:29 AM
Follow Us:
---Advertisement---

ಸಾಗರ : ತಾಲ್ಲೂಕಿನ ಆನಂದಪುರ ಸಮೀಪದ ಕರಡಿಮನೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತು ಕಳ್ಳತನವಾದ ಬಗ್ಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮೂರು ಜನರನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾ. 17 ರಂದು ಕರಡಿಮನೆ ಗ್ರಾಮದ ಸುರೇಶ್ ಎಂಬುವವರ ತೋಟದ ಮನೆಯ ಬಳಿ ಇರುವ ಕೊಟ್ಟಿಗೆಯಲ್ಲಿ ಕಟ್ಟಿದ್ದ 15 ಸಾವಿರ ಬೆಲೆಬಾಳುವ ಎತ್ತನ್ನು ಯಾರೂ ಇಲ್ಲದೆ ಇರುವ ಸಂದರ್ಭದಲ್ಲಿ ಕಳ್ಳತನ ಮಾಡಿದ್ದರು.

ಕಾರ್ಯಚರಣೆ ನಡೆಸಿದ ಪಿಎಸ್ಐ ಪ್ರವೀಣ್ ಅವರ ನೇತೃತ್ವದ ತಂಡ ಮಾ.19 ರಂದು ಮೂರು ಜನರನ್ನು ಬಂಧನ ಮಾಡಲು ಯಶಸ್ವಿಯಾಗಿದ್ದಾರೆ‌. ಆರೋಪಿಗಳಾದ ಮುರುಘಾಮಠದ ಕಬೀರ್, ಇರುವಕ್ಕಿಯ ತೋಳಿಕಲ್ ಗ್ರಾಮದ ನಾಗರಾಜ್ ಹಾಗು ದೇವೇಂದ್ರ ಅವರನ್ನು ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join WhatsApp

Join Now

Join Telegram

Join Now

Leave a Comment