ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಬಂಗಾರ ಕದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು. Villagers caught the thief who stole the gold and handed him over to the police.

On: March 19, 2026 1:48 PM
Follow Us:
---Advertisement---

ಸಾಗರ : ಬಂಗಾರ ಕದ್ದು ಓಡಿ ಹೋಗಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಬ್ರಾಹ್ಮಣ ಮಂಚಾಲೆ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

ಫೆ.19 ರಂದು ಬ್ರಾಹ್ಮಣ ಮಂಚಾಲೆ ಗ್ರಾಮದ ನಾಗರತ್ನಮ್ಮ ಎಂಬುವರ ಮನೆಯ ಬಾಗಿಲು ಮುರಿದು 70 ಸಾವಿರ ಬಂಗಾರ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ವಿಷಯವಾಗಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಮಾ.18 ರಂದು ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ಮತ್ತೊಮ್ಮೆ ಕಳ್ಳತನ ಮಾಡಲು ಹೊಂಚು ಹಾಕಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಕಂಡು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯು ಹೊಸನಗರ ತಾಲ್ಲೂಕಿನ ಕಣ ಬಂದೂರು ಗ್ರಾಮದ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈತನೇ ಫೆ.19 ರಂದು ಬ್ರಾಹ್ಮಣ ಮಂಚಾಲೆ ಗ್ರಾಮದ ನಾಗರತ್ನಮ್ಮ ಎಂಬವರ ಮನೆ ಬಾಗಿಲು ಮುರಿದು ಬಂಗಾರ ಕದ್ದ ಕಳ್ಳನಾಗಿದ್ದಾನೆ.

ಬಂಧಿತ ಆರೋಪಿಯಿಂದ 12.21 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 

Join WhatsApp

Join Now

Join Telegram

Join Now

Leave a Comment