ಬೆಂಗಳೂರು : ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 19ನೇ ಆವೃತ್ತಿಯ ಫೈನಲ್ ಪಂದ್ಯ ಇಂದು ಸಂಜೆ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಎರಡು ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು. ಈ ಫೈನಲ್ ನಲ್ಲಿ ಯಾರೇ ಗೆದ್ದರೂ ಇದು ತಂಡಕ್ಕೆ ಎರಡನೇ ಕಪ್ ಆಗಲಿದೆ. ಕ್ವಾಲಿಫೈಯರ್ 1ರಲ್ಲಿ ಆರ್ಸಿಬಿ ಜಿ.ಟಿ ಯನ್ನು ಸೋಲಿಸಿ ಫೈನಲ್ ಗೆ ಬಂದಿದೆ. ಜಿಟಿ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಆರ್ ಅನ್ನು ಸೋಲಿಸಿ ಫೈನಲ್ ಗೆ ಬಂದಿದೆ.
ಆರ್ಸಿಬಿಯಲ್ಲಿ ನಿರರ್ಗಳವಾಗಿ ಬ್ಯಾಟಿಂಗ್ ಮಾಡುವ ಉತ್ತಮ ತಂಡವಿದೆ. ಆರ್ ಸಿ ಬಿ ಓಪನಿಂಗ್ ಬ್ಯಾಟರ್ ಫಿಲ್ ಸಾಲ್ಟ್ ತಂಡಕ್ಕೆ ಮರಳಿದರೆ ಬ್ಯಾಟಿಂಗ್ ಬಲ ಇನ್ನಷ್ಟು ಹೆಚ್ಚಲಿದೆ. ತಂಡದಲ್ಲಿ ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ , ಟೀಮ್ ಡೇವಿಡ್, ಜಿತೇಶ್ ಶರ್ಮ ಸೇರಿದಂತೆ ಉತ್ತಮ ಬ್ಯಾಟಿಂಗ್ ಲೈನ್ ಹೊಂದಿದೆ.
ಆರ್ ಸಿ ಬಿ ಯ ಬೌಲಿಂಗ್ ವಿಭಾಗದಲ್ಲಿಯೂ ಸಹ ಪಂದ್ಯದ ಫಲಿತಾಂಶದ ಗತಿಯನ್ನೇ ಬದಲಿಸುವ ಸಾಮರ್ಥ್ಯವುಳ್ಳ ಬೌಲರ್ ಗಳು ಇದ್ದಾರೆ. ಭುವನೇಶ್ವರ್ ಕುಮಾರ್, ಜೋಷ್ ಹ್ಯಾಜಲ್ ವುಡ್ ರಸಿಕ್ ಸಲಾಂದಾರ್, ಕೃನಾಲ್ ಪಾಂಡ್ಯ, ಜಾಕೋಬ್ ಡಪಿ, ಸುಯೇಶ್ ಶರ್ಮ ಅವರನ್ನು ನೆಚ್ಚಿಕೊಂಡಿದೆ.
ಇನ್ನು GT ತಂಡದಲ್ಲಿಯೂ ಸಹ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅತ್ಯುತ್ತಮ ಓಪನಿಂಗ್ ನೀಡುತ್ತಾ ಬಂದಿದ್ದಾರೆ. ನಂತರ ಬರುವ ಜೋಸ್ ಬಟ್ಲರ್ ತಂಡಕ್ಕೆ ಆಸರೆಯಾಗಿ ನಿಲ್ಲಬಲ್ಲರು. ಇವರ ಜೊತೆಗೆ ವಾಷಿಂಗ್ಟನ್ ಸುಂದರ್, ರಾಹುಲ್ ತೇವಾಟಿಯ, ಜೇಸನ್ ಹೋಲ್ಡರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಲಯದಲ್ಲಿದ್ದಾರೆ.
ಗುಜರಾತ್ ಉತ್ತಮ ಬೌಲಿಂಗ್ ಲಯವನ್ನು ಹೊಂದಿದ್ದು, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ಇವರಿಗೆ ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ ಹಾಗೂ ಜೆಸ್ಸನ್ ಹೋಲ್ಡರ್ ಅತ್ಯುತ್ತಮ ಸಾತ್ ನೀಡುತ್ತಿದ್ದಾರೆ.
19ನೇ ಆವೃತ್ತಿಯಲ್ಲಿ ಎರಡು ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು ಆರ್ ಸಿ ಬಿ ಎರಡು ಪಂದ್ಯವನ್ನ ಗೆದ್ದಿದೆ. ಗುಜರಾತ್ ತಂಡಕ್ಕೆ ಅಹಮದಾಬಾದ್ ಹೋಂ ಪಿಚ್ ಆಗಿದ್ದು, ಈ ಆವೃತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ 5 ರಲ್ಲಿ ಜಯಗಳಿಸಿ ಎರಡನೇ ಬಾರಿಗೆ ಕಪ್ ಮುಡಿಗೇರಿಸುವ ತವಕದಲ್ಲಿದೆ.
ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಕ್ ದಾರ್, ಭುವನೇಶ್ವರ ಕುಮಾರ್, ಜೋರ್ಡಾನ್ ಕಾಕ್ಸ್, ಸುಯಾಶ್ ಶರ್ಮಾ, ವೆಂಕಟೇಶ್ ಅಯ್ಯರ್, ಸ್ವಪ್ನಿಲ್ ಸಿಂಗ್, ಜಾಕೋಬ್ ಡಫಿ, ಕನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ವಿಹಾನ್ ಮಲ್ಹೋತ್ರಾ.
ಗುಜರಾತ್ ಟೈಟಾನ್ಸ್
ಸಾಯಿ ಸುದರ್ಶನ್, ಶುಭಮನ್ ಗಿಲ್ (ಸಿ), ಶಾರುಖ್ ಖಾನ್, ಅನುಜ್ ರಾವತ್, ಜೋಸ್ ಬಟ್ಲರ್, ಕುಮಾರ್ ಕುಶಾಗ್ರಾ, ಟಾಮ್ ಬ್ಯಾಂಟನ್, ಗ್ಲೆನ್ ಫಿಲಿಪ್ಸ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ಸಾಯಿ ಕಿಶೋರ್, ಜಯಂತ್ ಯಾದವ್, ಅರ್ಷದ್ ಖಾನ್, ಅರ್ಷದ್ ಖಾನ್





