ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ನಾಗರ ಪಂಚಮಿ : ಭಕ್ತರಿಂದ ಶ್ರದ್ಧಾಭಕ್ತಿಯಿಂದ ನಾಗದೇವರಿಗೆ ಕ್ಷೀರಾಭಿಷೇಕ

On: August 17, 2026 7:56 AM
Follow Us:
---Advertisement---

ಸಾಗರ (ಆನಂದಪುರ) : ನಾಗರ ಪಂಚಮಿ ಹಬ್ಬವನ್ನು ತಾಲೂಕಿನಾದ್ಯಂತ ಭಕ್ತರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.

ಭಕ್ತರು ನಾಗದೇವತೆಗೆ ಭಯ ಭಕ್ತಿಯಿಂದ ಸುಬ್ರಹ್ಮಣ್ಯ ದೇವಸ್ಥಾನ, ನಾಗಬನಗಳಿಗೆ ತೆರಳಿ ದರ್ಶನ ಪಡೆದರು. ದೇವರಿಗೆ ಹಾಲಿನ ಅಭಿಷೇಕ ಹೂವು ಹಣ್ಣು ನೈವೇದ್ಯ ಅರ್ಪಿಸಿ ಭಕ್ತಿ ಪೂರ್ವಕವಾಗಿ ನಮಿಸಿದರು.

ಪಾರಂಪರಿಕವಾಗಿ ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ನಾಗರ ಪಂಚಮಿ ಹಬ್ಬ ಹೂ ಹಿಂದುಗಳ ವಿಶೇಷ ಹಬ್ಬವಾಗಿದ್ದು, ಮನೆ ದೇವಸ್ಥಾನಗಳಲ್ಲಿ ಸಂಭ್ರಮ ಸಡಗರ ಮೂಡಿದೆ.

nagara panchami 2

ಉತ್ತರ ಕರ್ನಾಟಕ ಭಾಗಗಳಲ್ಲಿ ಇದು ಅಣ್ಣ – ತಂಗಿಯರ ಪ್ರೀತಿಯ ಹಬ್ಬವಾಗಿಯೂ ಸಹ ಆಚರಣೆ ಮಾಡಲಾಗುತ್ತದೆ. ಅಣ್ಣಂದಿರ ಒಳತಿಗಾಗಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುತ್ತಾರೆ. ಜೊತೆಗೆ ಅಣ್ಣ ತಂಗಿಯರು ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬಕ್ಕೆ ಇನ್ನಷ್ಟು ಮೆರಗು ಹೆಚ್ಚಿಸುತ್ತಾರೆ.

ಇದು ಪ್ರಕೃತಿಯ ಕುಟುಂಬದ ಪ್ರೀತಿಯನ್ನು ಸಾರುವ ಸಾಂಸ್ಕೃತಿಕ ಹಬ್ಬವಾಗಿ ಪ್ರಕೃತಿಯನ್ನು ಗೌರವಿಸುತ್ತಾ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಗೂಳಿಸೋಣ ಎನ್ನುತ್ತಾ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 

Join WhatsApp

Join Now

Join Telegram

Join Now

Leave a Comment