ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಂದನೆ : ಯಡೆೇಹಳ್ಳಿ ರಸ್ತೆ ಕಾಮಗಾರಿಗೆ ಚಾಲನೆ

On: July 19, 2026 2:15 PM
Follow Us:
---Advertisement---

ಸಾಗರ : ತಾಲೂಕಿನ ಆನಂದಪುರ ಸಮೀಪದ ಯಡೆೇಹಳ್ಳಿ ಗ್ರಾಮಸ್ಥರ ಮನವಿಯ ಹಿನ್ನಲೆಯಲ್ಲಿ ಯಡೆೇಹಳ್ಳಿಯಲ್ಲಿ ನಡೆಯಬೇಕಾಗಿರುವ ರೈಲ್ವೆ ಕಾಮಗಾರಿ ಕೆಲ ದಿನಗಳ ಕಾಲ ಮುಂದೂಡಲಾಗಿದೆ.

ಯಡೆೇಹಳ್ಳಿ ಗ್ರಾಮಸ್ಥರ ಮನವಿ : ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು

ಯಡೆೇಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ಕಾಮಗಾರಿ ನಡೆದಿದ್ದರೆ, ಯಡೆೇಹಳ್ಳಿ ಗ್ರಾಮಸ್ಥರು ಹತ್ತಾರು ಕಿಲೋಮೀಟರ್ ಸುತ್ತುವರೆದು ಆನಂದಪುರಕ್ಕೆ ಬರುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಪರ್ಯಾಯವಾಗಿ ಇರುವಂತಹ ಬದಲಿ ರಸ್ತೆಯಾದ ಯಡೆೇಹಳ್ಳಿ – ರೊಟ್ಟಿ ಫ್ಯಾಕ್ಟರಿ – ಅಡೂರು ರಸ್ತೆ ಗುಂಡಿಗಳು ಹಾಗೂ ಮಳೆಯಿಂದಾಗಿ ಕೆಸರುಮಯವಾಗಿ ಸಾರ್ವಜನಿಕರು ಓಡಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಯಡೆೇಹಳ್ಳಿ ಗ್ರಾಮಸ್ಥರು ಈ ರಸ್ತೆಯನ್ನು ದುರಸ್ತಿಗೊಳಿಸಿದ ನಂತರ ರೈಲ್ವೆ ಕಾಮಗಾರಿ ಕೈಗೊಳ್ಳಲು ಶಾಸಕರ ಬಳಿ ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿದ ಶಾಸಕರು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ತ್ವರಿತವಾಗಿ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿ ತ್ವರಿತವಾಗಿ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರವಿಕುಮಾರ್ ಯಡೆೇಹಳ್ಳಿ, ಸಮಿ, ಇಮ್ರಾನ್, ದಾದಾಪೀರ್, ರಿಯಾಜ್, ಶೌಕತ್ ಆಲಿ, ಜಿಯಾವುಲ್ಲಾ, ರಾಜು ದೇವಾಡಿಗ, ಸುನಿಲ್ ಶೆಟ್ಟಿ, ರಾಕೇಶ್, ಪ್ರಸನ್ನ ಇದ್ದರು.

Join WhatsApp

Join Now

Join Telegram

Join Now

Leave a Comment