ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ದಾಳಿ : ಕಾಡಿನಲ್ಲಿ ಅಕ್ರಮ ತೂರಾಬಿಲ್ಲೆ ಜೂಜಾಟ : ಮೂವರ ಬಂಧನ

On: July 13, 2026 3:21 AM
Follow Us:
---Advertisement---

ಸಾಗರ : ತಾಲೂಕಿನ ಆನಂದಪುರ ಪೊಲೀಸರು ಬಹುದೊಡ್ಡ ಕಾರ್ಯಚರಣೆ ನಡೆಸಿ ಕಾಡಿನಲ್ಲಿ  ಅಕ್ರಮವಾಗಿ ತೂರಾಬಿಲ್ಲೆ ಜೂಜಾಟ ಅಡ್ಡದ ಮೇಲೆ ದಾಳಿಯಲ್ಲಿ ಮೂವರ ಬಂಧನ ಮಾಡಿದ್ದಾರೆ.

ಆನಂದಪುರ ಸಮೀಪದ ಮುಂಬಾಳು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಜುಲೈ 12ರಂದು ತೂರಾಬಿಲ್ಲೆ ಜೂಜಾಟ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಪಿಎಸ್ಐ ಪ್ರವೀಣ್ ಅವರು ದಾಳಿ ನಡೆಸಿ ಜೂಜಾಟವಾಡುತ್ತಿದ್ದ ಮೂವರನ್ನು ಬಂಧನ ಮಾಡಿದ್ದಾರೆ.

ಮೂವರು ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ 4,200 ರೂ. ನಗದು ಹಾಗೂ ₹1  ಮುಖಬೆಲೆಯ ಎರಡು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ತೂರಬಿಲ್ಲೆ ಜೂಜಾಟ ಬಂದಿತ ಆರೋಪಿಗಳನ್ನು ಸಂತೋಷ್ , ಶಿವು, ಶಹಬಾಜ್ ಎಂದು ಗುರುತಿಸಲಾಗಿದೆ.

ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐದಾರು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಬಂದಿದ್ದು, ಮುಂದುವರಿದ ತನಿಖೆಯಲ್ಲಿ ಇನ್ನೆಷ್ಟು ಆರೋಪಿಗಳು ಬಲಗೆ ಬೀಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Join WhatsApp

Join Now

Join Telegram

Join Now

Leave a Comment