ಸಾಗರ : ನಗರದ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆಯ ಎದುರಿನ ಗೋಡಾನ್ ಅಲ್ಲಿ ಅಕ್ರಮವಾಗಿ ಗಾಂಜಾ ಹಾಗೂ ಎಂಡಿಎಂ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಾಗರ ಟೌನ್ ಪೊಲೀಸರು ಬಂಧನ ಮಾಡಿದ್ದಾರೆ
ಸಾಗರದ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆ ಎದುರಿನ ಗೋಡಾನ್ ನಲ್ಲಿ ಅಕ್ರಮವಾಗಿ ಗಾಂಜಾ ಹಾಗೂ ಎಂಡಿಎಂ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಜಿಲ್ಲಾ ಪೊಲೀಸ್ ಅಧಿಕ್ಷಕರಾದ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕರಾದ ಬೆನಕ ಪ್ರಸಾದ್, ಪೊಲೀಸ್ ನಿರೀಕ್ಷಕರಾದ ಪುಲ್ಲಯ್ಯ ರಾಥೋಡ್, ಪಿಎಸ್ ಐ ಶಾಂತರಾಜ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ನರೇಂದ್ರ, ಕೃಷ್ಣಮೂರ್ತಿ ,ಮೋಹನ್, ಚಿದಾನಂದ, ಲೋಹಿತ್ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿ ಅಕ್ರಮ ಗಾಂಜಾ ಮಾರುತಿದ ವ್ಯಕ್ತಿಯನ್ನು ಬಂಧನ ಮಾಡಿದ್ದಾರೆ.
ಅಕ್ಬರ್ ಬೇಗ್ (40) ಆರೋಪಿಯಾಗಿದ್ದು, ಈತನಿಂದ 150 ಗ್ರಾಂ ತೂಕದ ಒಣ ಗಾಂಜಾ (ಮೌಲ್ಯ 10000), ಹತ್ತು ಗ್ರಾಂ ತೂಕದ ಎಡಿಎಂ (ಮೌಲ್ಯ 25000) ವಶಪಡಿಸಿಕೊಂಡಿದ್ದಾರೆ.
ಸಾಗರ ಟೌನ್ ಪೋಲಿಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.






