ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕಳ್ಳತನ ಪ್ರಕರಣ : ಪಿಎಸ್ ಐ ಪ್ರವೀಣ್ ನೇತೃತ್ವದ ತಂಡದ ಕಾರ್ಯಚರಣೆ : ಟೈರ್ ಕಳ್ಳನ ಬಂಧನ.

On: July 3, 2026 3:56 PM
Follow Us:
---Advertisement---

ಸಾಗರ : ತಾಲೂಕಿನ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಟೈರ್ ಕಳ್ಳತನವನ್ನು ಭೇದಿಸುವಲ್ಲಿ ಪ್ರವೀಣ್ ಹಾಗೂ ಅವರ ನೇತೃತ್ವದ ಪೊಲೀಸರು ತಂಡ ಯಶಸ್ವಿಯಾಗಿದೆ.

ಆರೋಪಿಯನ್ನ ಬಂಧಿಸಿರುವ ಪೊಲೀಸರು, ಆರೋಪಿಯಿಂದ 45,000 ಮೌಲ್ಯದ 3 ಸ್ಟೆಪ್ನಿ ಟೈರ್ ಮತ್ತು ರಿಮ್ ಅನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ಟಿಪ್ಪು ನಗರದ ಸೋನು ಕಳ್ಳತನದ ಆರೋಪಿ, ಈತನಿಂದ 45,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ

ಫೆಬ್ರವರಿ 6 ರಂದು ಆಚಾಪುರ ಗ್ರಾಮದ ಶಿವಾ ಶ್ರೇಯಾ ಎಂಟರ್‌ಪ್ರೈಸಸ್ ಮಳಿಗೆ ಮುಂಭಾಗ ನಿಲ್ಲಿಸಿದ ಮೂರು ಟಾಟಾ ಇಂಟ್ರಾ ವಾಹನಗಳ ಮೂರು ಟೈರ್ ಹಾಗೂ ರಿಮ್ ಗಳ ಕಳ್ಳತನದ ಬಗ್ಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಮೇಲಾಧಿಕಾರಿಗಳ ಸೂಚನೆಯಂತೆ ಪಿಎಸ್ಐ ಪ್ರವೀಣ್ ಹಾಗೂ ಅವರ ನೇತೃತ್ವದ ತಂಡ ಪ್ರಕರಣವನ್ನು ಜುಲೈ 3 ರಂದು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಶಾಂತ್ ಉಮೇಶ್ ಭಾಗವಹಿಸಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪಿಐ ಪ್ರವೀಣ್ ಅವರ ನೇತೃತ್ವದ ತಂಡಕ್ಕೆ ಶಿವಮೊಗ್ಗದ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment