ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

On: June 6, 2026 7:39 AM
Follow Us:
---Advertisement---

ಸಾಗರ : ಕಡಿಮೆ ಬೆಲೆಗೆ ಬಂಗಾರ ಸಿಗುತ್ತದೆ ಎಂದು ಬಂಗಾರದ ಆಸೆಗೆ ಬಿದ್ದು, 10 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ಆನಂದಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

ನಿಧಿಯ ರೂಪದಲ್ಲಿ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರಿಂದ 9.60 ಲಕ್ಷ ಹಣ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ದೋಚಿ ಪರಾರಿಯಾದ ಘಟನೆ ಸಾಗರ ತಾಲೂಕಿನ ಜೋಗಿನಗದ್ದೆ  ಎಂಬ ಗ್ರಾಮದಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್ ಪುರದ ನಿವಾಸಿ ಜಗದೀಶ್.ಜೆ (41) ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಜಗದೀಶ್ ಅವರಿಗೆ ಜೂನ್ 1 2026 ರಂದು ಅಪರಿಚಿತ ನಂಬರ್ ಇಂದ ಕರೆ ಮಾಡಿ ತನಗೆ ನಿಧಿ (ಬಂಗಾರದ ನಾಣ್ಯಗಳು) ಸಿಕ್ಕಿದ್ದು, ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದಾನೆ. ಇದಲ್ಲದೆ ವಿಡಿಯೋ ಕಾಲ್ ಮೂಲಕ ನಾಣ್ಯಗಳನ್ನು ತೋರಿಸಿ ಜಗದೀಶ್ ಅವರಲ್ಲಿ ನಂಬಿಕೆ ಮೂಡಿಸುವ ಕೆಲಸ ಮಾಡಿದ್ದಾರೆ.

ಇದನ್ನು ನಂಬಿದ ಜಗದೀಶ್ ಅವರು ಜೂನ್ 2 ರಂದು ಹರಿಹರಕ್ಕೆ ಹೋಗಿದ್ದಾರೆ. ಅಲ್ಲಿ ಇಬ್ಬರು ಆರೋಪಿಗಳು ಅವರಿಗೆ ಒಂದು ನಾಣ್ಯವನ್ನು ನೀಡಿ ಅಸಲಿತನವನ್ನು  ಪರಿಶೀಲಿಸಿಕೊಳ್ಳುವಂತೆ ತಿಳಿಸಿದ್ದಾರೆ. ನಮ್ಮ ಬಳಿ ಒಂದುವರೆ ಕೆಜಿ ಬಂಗಾರದ ನಾಣ್ಯಗಳಿವೆ ಪರಿಶೀಲನೆ ನಡೆಸಿ ನಮಗೆ ತಿಳಿಸಿ ಎಂದು ಹೇಳಿದ್ದಾರೆ. ಜಗದೀಶ್ ಅವರು ಮೈಸೂರು ಗೆ ಮರಳಿ ನಾಣ್ಯವನ್ನು ಪರಿಶೀಲನೆ ನಡೆಸಿದಾಗ ಅಸಲಿ ಬಂಗಾರವೆಂದು ಖಾತರಿಯಾಗಿದೆ.

ಜೂನ್ 3 ರಂದು ಮತ್ತೆ ಕರೆ ಮಾಡಿದ ಆರೋಪಿಗಳು ಅರ್ಧ ಕೆಜಿ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ಹೇಳಿ 10 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಂಗಾರವನ್ನು ಪಡೆಯಬೇಕು ಎಂಬ ಮಹಾದಾಸೆಗೆ ಬಿದ್ದ ಜಗದೀಶ್ ಅವರು, ತಮ್ಮ ಸ್ನೇಹಿತರ ಫೈನಾನ್ಸ್ ಒಂದರಲ್ಲಿ ಮನೆ ಪೇಪರ್ ಹಾಗೂ ಶೂರಿಟಿಗೆ ಚೆಕ್ಕು ನೀಡಿ, 10 ಲಕ್ಷ ಸಾಲವನ್ನು ಪಡೆದುಕೊಂಡು, ತನ್ನ ಅಕ್ಕನ ಮಗ ಮನೋಜ್,  ಕಾರ್ ಡ್ರೈವರ್ ರೋಹಿತ್ ಸಿಂಗ್ ರವರೊಂದಿಗೆ ಸಾಗರದ ಜೋಗಿನ ಗದ್ದೆಗೆ ಬಂದಿದ್ದಾರೆ. ಅಲ್ಲಿ ಆರೋಪಿಗಳಾದ ಮಂಜು ಹಾಗೂ ಆತನ ಸಹಚರ ಹಣವನ್ನು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಿನಿಮಾ ಶೈಲಿಯ ಘಟನೆ ನಡೆದಿದೆ.

ವ್ಯವಹಾರ ನಡೆಯುತ್ತಿದ್ದ ಸಂದರ್ಭದಲ್ಲಿ 2 ಬೈಕಿನಲ್ಲಿ 4 ಜನ ಅಪರಿಚಿತರು ಬಂದಿದ್ದಾರೆ. ಅಪರಿಚಿತರು ಜಗದೀಶ್ ಹಾಗೂ ಅವರ ತಂಡವನ್ನು ತರಾಟೆಗೆ ತೆಗೆದುಕೊಂಡು ನಿಮ್ಮದು ಊರು ಯಾವುದು, ಸ್ಮಗ್ಲಿಂಗ್  ಮಾಡುತ್ತಿದ್ದಾರಾ,  ಗಾಂಜಾ ಮಾರುತ್ತಿರಾ ಎಂದು  ಗದರಿಸಿದ್ದಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಇನ್ನಿಬ್ಬರು ಯಾರೂ ಬಂದರೂ ಓಡಿರಿ ಎಂದು ಹೇಳುತ್ತಾ, ಜಗದೀಶ್ ಅವರ ಕೈಯಲ್ಲಿದ್ದ ಹಣದ ಬ್ಯಾಗ್ ಹಾಗೂ ನಾಣ್ಯವನ್ನು ದೋಚಿದಲ್ಲದೆ, ಜಗದೀಶ್ ಹಾಗೂ ಮನೋಜ್ ಅವರ ಫೋನುಗಳನ್ನು ಸಹ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪಿಎಸ್ಐ ಪ್ರವೀಣ್ ಹಾಗೂ ಅವರ ತಂಡ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

Leave a Comment