ಸಾಗರ ಸಮೀಪ “ತಪೋವನ” – ಜೀವನ, ಹೂಡಿಕೆ ಮತ್ತು ನೆಮ್ಮದಿಯನ್ನು ಒಂದೇ ಜಾಗದಲ್ಲಿ ಕಟ್ಟಿಕೊಡುವ ವಿಶಿಷ್ಟ ಫಾರ್ಮ್‌ಲ್ಯಾಂಡ್ ಪರಿಕಲ್ಪನೆ.
ಸಾಗರ. : ನಿಮಗೂ ಒತ್ತಡದ ಜೀವನದಿಂದ ಹೊರಬಂದು, ಮನಸ್ಸಿಗೆ ನೆಮ್ಮದಿ ಹಾಗೂ ಪ್ರಕೃತಿಯ ನಡುವೆ ಜೀವನ ಕಳೆಯಲು ಫಾರ್ಮ್ ಲ್ಯಾಂಡ್ ಹೊಂದಬೇಕು ಎನ್ನುವ ಆಸೆ ಇದೆಯೇ? . ಈ ನಿಟ್ಟಿನಲ್ಲಿ ನಿಮ್ಮ ಯೋಜನೆಯನ್ನು ಸಾಗರದ ಆಗಮನ ಡೆವಲಪರ್ಸ್ ನಿಮ್ಮ ಕನಸನ್ನು ಸಾಕಾರಗೊಳಿಸುತ್ತಿದೆ.
ಇಂದಿನ ವೇಗದ ನಗರ ಜೀವನದಲ್ಲಿ ಹಣ ಸಂಪಾದನೆ ಹೆಚ್ಚಾದರೂ, ಮನಸ್ಸಿನ ನೆಮ್ಮದಿ ಮತ್ತು ಪ್ರಕೃತಿಯ ಸಂಪರ್ಕ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವಾರಾಂತ್ಯಗಳು ಮಾಲ್, ಟ್ರಾಫಿಕ್, ರೆಸಾರ್ಟ್‌ಗಳ ನಡುವೆ ಕಳೆದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ, ಮನುಷ್ಯನಿಗೆ ಮತ್ತೆ ಪ್ರಕೃತಿಯತ್ತ ಮರಳುವ ಆಸೆ ಹೆಚ್ಚಾಗಿದೆ. ಇದೇ ಆಲೋಚನೆಯಿಂದ ಸಾಗರದ ಸಮೀಪ ರೂಪುಗೊಂಡಿರುವ ವಿಶಿಷ್ಟ ಫಾರ್ಮ್‌ಲ್ಯಾಂಡ್ ಯೋಜನೆಯೇ “ತಪೋವನ”.
ಅಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ “ತಪೋವನ”, ಸಂಸ್ಥೆಯ ಮೂರನೇ ಮಹತ್ವಾಕಾಂಕ್ಷಿ ಫಾರ್ಮ್‌ಲ್ಯಾಂಡ್ ಯೋಜನೆಯಾಗಿದೆ. ಇದಕ್ಕೂ ಮೊದಲು ಸಾಗರದಲ್ಲಿ ಅಭಿವೃದ್ಧಿಪಡಿಸಿದ್ದ “ನಂದನವನ” ಮತ್ತು “ತ್ರಿಭುವನ” ಫಾರ್ಮ್‌ಲ್ಯಾಂಡ್ ಯೋಜನೆಗಳಿಗೆ ಉತ್ತಮ ಸ್ಪಂದನೆ ದೊರೆತು, ಎರಡೂ ಯೋಜನೆಗಳು ಸಂಪೂರ್ಣವಾಗಿ sold out ಆಗಿರುವುದು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸಿದೆ.
ಮಲೆನಾಡಿನ ಹಸಿರು ಪರಿಸರದ ಮಧ್ಯೆ ಸುಮಾರು 40 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ “ತಪೋವನ” ಕೇವಲ ಒಂದು ಫಾರ್ಮ್‌ಲ್ಯಾಂಡ್ ಯೋಜನೆ ಮಾತ್ರವಲ್ಲ. ಇದು ಜೀವನಶೈಲಿ, ಹೂಡಿಕೆ, ಆದಾಯ ಮತ್ತು ಭವಿಷ್ಯದ ನೆಮ್ಮದಿಯನ್ನು ಒಂದೇ ಜಾಗದಲ್ಲಿ ಒಟ್ಟುಗೂಡಿಸುವ ಕನಸಿನ ಪರಿಕಲ್ಪನೆ.
ಸಾಗರ ಮೂಲದ ಉದ್ಯಮಿಗಳಾದ ಸುದರ್ಶನ್ ಭಟ್ ಮತ್ತು ವಿನಯ್ ಹೆಗಡೆ ಅವರ ಕನಸಿನ ಯೋಜನೆಯಾಗಿ “ತಪೋವನ” ರೂಪುಗೊಂಡಿದೆ. ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಮಾರು 9 ವರ್ಷಗಳ ಅನುಭವ ಹೊಂದಿರುವ ಈ ಇಬ್ಬರು ಯುವ ಉದ್ಯಮಿಗಳು, ನಗರಗಳಲ್ಲಿ ನೆಲೆಸಿರುವ ಜನರಿಗೆ ಭವಿಷ್ಯದ ನೆಮ್ಮದಿ ಹಾಗೂ ನಿವೃತ್ತಿ ಜೀವನಕ್ಕಾಗಿ ಪ್ರಕೃತಿಯೊಂದಿಗಿನ ಒಂದು ಅರ್ಥಪೂರ್ಣ ಸ್ಥಳವನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದ್ದಾರೆ.
“ಜನರು ಕೇವಲ ಜಮೀನು ಖರೀದಿಸಬಾರದು… ಭವಿಷ್ಯದ ಜೀವನಶೈಲಿಯನ್ನು ನಿರ್ಮಿಸಿಕೊಳ್ಳಬೇಕು” ಎಂಬ ಚಿಂತನೆಯೇ ತಪೋವನದ ಮೂಲ ತತ್ವವಾಗಿದೆ.
ಪ್ರಕೃತಿಯ ನಡುವೆ ಆದಾಯ ತರುವ ಫಾರ್ಮ್‌ಲ್ಯಾಂಡ್
ತಪೋವನದಲ್ಲಿ 29 ಗುಂಟೆಯಿಂದ 60 ಗುಂಟೆಗಳವರೆಗೆ ವಿವಿಧ ಗಾತ್ರದ ಗೇಟೆಡ್ ಫಾರ್ಮ್‌ಲ್ಯಾಂಡ್ ಪ್ಲಾಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ 40 ಎಕರೆ ಹಸಿರು ತೋಟದ ಮಧ್ಯೆ ಈ ಯೋಜನೆ ರೂಪುಗೊಂಡಿದೆ.
ಪ್ರತಿ ಪ್ಲಾಟ್‌ನಲ್ಲೂ ಆದಾಯ ತರುವ ಪ್ರಮುಖ ಬೆಳೆಗಳಾದ ಸಿಲ್ವರ್ ಓಕ್, ಕಾಳು ಮೆಣಸು, ಕಾಫಿ, ಮ್ಯಾಂಗೋಸ್ಟೀನ್ ಸೇರಿದಂತೆ ಹಲವಾರು ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಹಲಸು, ಮಾವು, ಅವಕಾಡೋ (ಬಟರ್ ಫ್ರೂಟ್), ಮ್ಯಾಕಾಡಿಮಿಯಾ, ಡ್ರಾಗನ್ ಫ್ರೂಟ್ ಸೇರಿದಂತೆ ವಿವಿಧ ಹಣ್ಣಿನ ತೋಟಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.
ಪ್ರತಿ ಎಕರೆಗೆ ವರ್ಷಕ್ಕೆ ₹7 ರಿಂದ ₹8 ಲಕ್ಷದವರೆಗೆ ಆದಾಯ ಸಾಮರ್ಥ್ಯ ಹೊಂದಿರುವ ಮಾದರಿಯನ್ನು ತಂಡ ರೂಪಿಸಿರುವುದು ವಿಶೇಷ. ಇಲ್ಲಿ ಪ್ರಕೃತಿ ಮಧ್ಯೆ ಜೀವನ + ಹೂಡಿಕೆ + ಆದಾಯ—all in one concept ಅಡಿಯಲ್ಲಿ ಯೋಜನೆ ರೂಪುಗೊಂಡಿದೆ.
ಉತ್ತಮ ಸೌಲಭ್ಯಗಳೊಂದಿಗೆ ಸಂಪೂರ್ಣ ಯೋಜನೆ
ತಪೋವನ ಕೇವಲ ಜಮೀನು ಮಾರಾಟ ಮಾಡುವ ಯೋಜನೆಯಲ್ಲ, ಉತ್ತಮ ನಿರ್ವಹಣೆಯೊಂದಿಗೆ ದೀರ್ಘಾವಧಿಯ ಫಾರ್ಮ್‌ಲ್ಯಾಂಡ್ ಸಮುದಾಯವನ್ನು ನಿರ್ಮಿಸುವ ಪ್ರಯತ್ನವಾಗಿದೆ.
ಯೋಜನೆಯಲ್ಲಿ ಪ್ರತಿ ಪ್ಲಾಟ್‌ಗೆ ಫೆನ್ಸಿಂಗ್ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ತೋಟಕ್ಕೆ ಉತ್ತಮ ನೀರಿನ ವ್ಯವಸ್ಥೆ (ಕೃಷಿ ಹೊಂಡ + ಪೈಪ್‌ಲೈನ್ ವ್ಯವಸ್ಥೆ) ಹಾಗೂ ಒಳಾಂಗಣ ರಸ್ತೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಇದರ ಜೊತೆಗೆ ಭವಿಷ್ಯದಲ್ಲಿ ಫಾರ್ಮ್‌ಹೌಸ್ ಅಭಿವೃದ್ಧಿಗೆ ಸಹ ಅನುಕೂಲವಾಗುವ ರೀತಿಯಲ್ಲಿ ಮೂಲಸೌಕರ್ಯಗಳನ್ನು ರೂಪಿಸಲಾಗುತ್ತಿದೆ.
“ಫಾರ್ಮ್‌ಲ್ಯಾಂಡ್ ನಿರ್ವಹಣೆ ಹೇಗೆ?” ಎಂಬ ಚಿಂತೆ ಬೇಡ
ಇಂದಿನ ದಿನಗಳಲ್ಲಿ ಹಲವರಿಗೆ ಫಾರ್ಮ್‌ಲ್ಯಾಂಡ್ ಖರೀದಿಸುವ ಆಸೆ ಇದ್ದರೂ, “ನಮಗೆ ಕೃಷಿ ಅನುಭವ ಹಾಗು ಸಮಯ ಇಲ್ಲ”, “ನಗರದಲ್ಲೇ ಇರುವುದರಿಂದ ನಿರ್ವಹಣೆ ಹೇಗೆ?” ಎಂಬ ಪ್ರಶ್ನೆಗಳು ಸಹಜವಾಗಿಯೇ ಎದುರಾಗುತ್ತವೆ.
ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಅಗಮನ ಡೆವಲಪರ್ಸ್ ಫಾರ್ಮ್‌ಲ್ಯಾಂಡ್ ನಿರ್ವಹಣೆಯ ವಿಶೇಷ ಆಯ್ಕೆಯನ್ನೂ ಒದಗಿಸುತ್ತಿದೆ. ತೋಟದ ನಿರ್ವಹಣೆ, ಬೆಳೆಯ ಆರೈಕೆ, ನೀರಾವರಿ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಹಾಗೂ ಜಮೀನನ್ನು ಉತ್ತಮ ಸ್ಥಿತಿಯಲ್ಲಿ ಉಳಿಸುವ ಸಂಪೂರ್ಣ ಸೇವೆಯನ್ನು ತಂಡ ನಿರ್ವಹಿಸಲಿದೆ.
ಅದರ ಮೂಲಕ ಕೃಷಿ ಅನುಭವವಿಲ್ಲದವರೂ ಸಹ ಆತ್ಮವಿಶ್ವಾಸದಿಂದ ಪ್ರಕೃತಿಯ ಜೀವನಶೈಲಿಯನ್ನು ಅನುಭವಿಸಬಹುದಾಗಿದೆ.
ಇದು ಕೇವಲ ಹೂಡಿಕೆ ಅಲ್ಲ… ಒಂದು ಬದುಕಿನ ಅನುಭವ
ತಪೋವನದ ಮತ್ತೊಂದು ಪ್ರಮುಖ ವೈಶಿಷ್ಟ್ಯ ಎಂದರೆ “Community Living Concept”. ಇಲ್ಲಿ ಜನರು ಕೇವಲ ಜಮೀನು ಹೊಂದುವುದಲ್ಲ; ಸಮಾನ ಮನಸ್ಕರ ಸಮುದಾಯದೊಂದಿಗೆ ಪ್ರಕೃತಿಯ ಜೀವನಶೈಲಿಯನ್ನು ಅನುಭವಿಸುವ ಅವಕಾಶವನ್ನು ಪಡೆಯುತ್ತಾರೆ.
40,000 ಚದರ ಅಡಿ ವಿಸ್ತೀರ್ಣದ curated community space, open community hall & stage, landscaped lawn, badminton court, dhyana mandira, weekend stay cottages ಹಾಗೂ Tapovana Café ಸೇರಿದಂತೆ ಅನೇಕ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಮದುವೆ ಸಮಾರಂಭಗಳು, ಕುಟುಂಬ ಕೂಟಗಳು, ವಾರಾಂತ್ಯದ ವಿಶ್ರಾಂತಿ, ಯೋಗ ಮತ್ತು ಧ್ಯಾನ ಚಟುವಟಿಕೆಗಳು ಇವೆಲಕ್ಕೂ ಅನುಕೂಲವಾಗುವಂತೆ ತಪೋವನ ವಿನ್ಯಾಸಗೊಳಿಸಲಾಗಿದೆ.
ನಗರ ಜನರಿಗೆ ಹೊಸ ದಿಕ್ಕು
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡುವ ಅನೇಕ ಕುಟುಂಬಗಳು, ನಿವೃತ್ತಿಯ ನಂತರದ ಜೀವನಕ್ಕಾಗಿ ಅಥವಾ ವಾರಾಂತ್ಯದ ನೆಮ್ಮದಿಗಾಗಿ ಫಾರ್ಮ್‌ಲ್ಯಾಂಡ್ ಕಡೆ ಮುಖ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಆದರೆ ಸರಿಯಾದ ದಾಖಲೆಗಳು, ನಿರ್ವಹಣೆ, ನೀರಿನ ವ್ಯವಸ್ಥೆ, ಕೃಷಿ ಜ್ಞಾನ ಹಾಗೂ ಭದ್ರತೆಯ ಕೊರತೆಯಿಂದ ಹಲವರು ಹಿಂಜರಿಯುತ್ತಿದ್ದರು. ಈ ಎಲ್ಲಾ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಒದಗಿಸುವ ಮಾದರಿಯಲ್ಲಿ ತಪೋವನ ರೂಪುಗೊಂಡಿದೆ.
ಗೇಟೆಡ್ ಫಾರ್ಮ್‌ಲ್ಯಾಂಡ್ ಕಮ್ಯುನಿಟಿ, ಉತ್ತಮ ರಸ್ತೆ ವ್ಯವಸ್ಥೆ, ವಿದ್ಯುತ್, ನೀರಾವರಿ ಸೌಲಭ್ಯ, ನಿರ್ವಹಣಾ ಬೆಂಬಲ ಹಾಗೂ ದೀರ್ಘಾವಧಿಯ ಕೃಷಿ ಯೋಜನೆ all under one ecosystem ಎಂಬ ವಿನ್ಯಾಸವನ್ನು ಇಲ್ಲಿ ಅನುಸರಿಸಲಾಗಿದೆ.
ಮಲೆನಾಡಿನ ಮಡಿಲಲ್ಲಿ ನೆಮ್ಮದಿಯ ಹೊಸ ವಿಳಾಸ
ಸಾಗರ ಸಮೀಪ ಲಿಂಗದಹಳ್ಳಿ (ಮರೂರ್) ಪ್ರದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ತಪೋವನ, ಮಲ್ನಾಡಿನ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡೇ ಆಧುನಿಕ ಅಗತ್ಯಗಳನ್ನು ಸೇರಿಸುವ ಪ್ರಯತ್ನವಾಗಿದೆ.
ನಗರ ಜೀವನದ ಗದ್ದಲದಿಂದ ದೂರವಾಗಿ, ಪ್ರಕೃತಿಯ ಮಧ್ಯೆ ಆರೋಗ್ಯಕರ ಹಾಗೂ ಸಮತೋಲನದ ಬದುಕನ್ನು ಕನಸು ಕಾಣುವವರಿಗೆ ತಪೋವನ ಹೊಸ ದಿಕ್ಕನ್ನು ತೋರಿಸುತ್ತಿದೆ.
₹42 ಲಕ್ಷದಿಂದ ಪ್ಲಾಟ್‌ಗಳು ಆರಂಭವಾಗುತ್ತಿದ್ದು, ಈಗಾಗಲೇ ಮಲ್ನಾಡು ಸೇರಿದಂತೆ ವಿವಿಧ ಭಾಗಗಳ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಗಮನ ಡೆವಲಪರ್ಸ್ ತಂಡವನ್ನು ಸಂಪರ್ಕಿಸಬಹುದು. ಕಚೇರಿಗೆ ಭೇಟಿಯನ್ನೂ ಸಹ ಮಾಡಬಹುದು ಅಥವಾ ನೇರವಾಗಿ ಫಾರ್ಮ್‌ಲ್ಯಾಂಡ್ ಸ್ಥಳಕ್ಕೂ ಭೇಟಿ ನೀಡಿ ಯೋಜನೆಯನ್ನು ವೀಕ್ಷಿಸಬಹುದು.
YouTube ವಿಡಿಯೋ ವೀಕ್ಷಿಸಲು :
Tapovana Project Video
Tapovana ಬ್ರೋಶರ್ ವೀಕ್ಷಿಸಲು :
Tapovana Farmland Brochure
ಸಂಪರ್ಕ ಸಂಖ್ಯೆ :
7090 644 644
7090 226 226
ಕಚೇರಿ :
#57, ಮೊದಲನೇ ಮಹಡಿ, ಒಡೆಯರ್ ಬಿಲ್ಡಿಂಗ್,
ಹಳೆಯ ಪ್ರೈವೇಟ್ ಬಸ್ ನಿಲ್ದಾಣದ ಹತ್ತಿರ,
ಕೋರ್ಟ್ ಎದುರು, ಬಿ.ಹೆಚ್ ರಸ್ತೆ,
ಸಾಗರ – 577401





