ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಮಾರಣಾಂತಿಕ ಹಲ್ಲೆ – ಏಳು ಆರೋಪಿತರ ವಿರುದ್ಧ ದೂರು ದಾಖಲು. Fatal assault – complaint filed against seven accused.

On: March 22, 2026 10:51 AM
Follow Us:
---Advertisement---

ಸಾಗರ : ತಾಲ್ಲೂಕಿನ ಮಳ್ಳಾ ಕೊಪ್ಪ ಗ್ರಾಮದಲ್ಲಿ ಹೈ ಟೆನ್ಷನ್ ವೈಯರ್ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪರಶುರಾಮ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ 7 ಜನರ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಶುರಾಮ ಅವರು ಸರ್ವೇಯರ್ ಮಲ್ಲನಗೌಡ ಹಾಗೂ ಇತರರೊಂದಿಗೆ ತಾಲ್ಲೂಕಿನ ಮಳ್ಳಾ ಕೊಪ್ಪ ಗ್ರಾಮದಲ್ಲಿ ಶಿವಕುಮಾರ್ ಅವರ ಜಾಗದಲ್ಲಿ ಹೈ ಟೆನ್ಷನ್ ವೈಯರ್ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ , ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು, ಕೈಗಳಲ್ಲಿ ದೊಣ್ಣೆ ಕಲ್ಲಿನಿಂದ ಸರ್ವೇಯರ್ ಮಲ್ಲನಗೌಡ ಅವರಿಗೆ , ಕೆಲಸ ಮಾಡಲು ಯಾರು ಹೇಳಿದ್ದು ಎಂದು ಹಲ್ಲೆ ಮಾಡಲು ಮುಂದಾಗುತ್ತಾರೆ.

ಈ ಸಂದರ್ಭದಲ್ಲಿ ಜಗಳ ಬಿಡಿಸಲು ಹೋದ ಪರಶುರಾಮ ಅವರಿಗೆ ಸಾಯಿಸುವ ಉದ್ದೇಶದಿಂದ ಕೈ, ಕಲ್ಲಿನಿಂದ ತಲೆ, ಎದೆಗೆ ಹೊಡೆದು , ಓಡಿಸಿಕೊಂಡು ಹೋದ ಸಂದರ್ಭದಲ್ಲಿ ಕುಮಾರ್ ಗೌಡ್ರು ಮನೆಯ ಬಳಿ ಬೀಳಿಸಿ, ಕಲ್ಲು ಕೋಲುಗಳಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕುಮಾರ್ ಗೌಡ್ರು ನೋಡಿದ ಆರೋಪಿಗಳು ಓಡಿಹೋಗಿದ್ದಾರೆ.

ಪರುಶುರಾಮ ಅವರು ಸಂಜು, ಸಂತೋಷ್, ರಾಘವೇಂದ್ರ, ಸಚಿನ್, ಸತೀಶ್, ಸುದೀಪ್, ಪರಮೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದೆ.

 

Join WhatsApp

Join Now

Join Telegram

Join Now

Leave a Comment