ಸಾಗರ : ಬೈಕ್ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆನಂದಪುರ ಸಮೀಪದ ಬಸವನಕೊಪ್ಪದ ರೈಲ್ವೆ ಗೇಟ್ ಬಳಿ ನಡೆದಿದೆ.
ಆನಂದಪುರ ಸಮೀಪದ ಬಿಸನಗದ್ದೆ ಗ್ರಾಮದ ಮಹೇಶ್ (26) ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರನಾಗಿದ್ದಾನೆ . ಬೈಕ್ ಸವಾರ ರಿಪ್ಪನ್ ಪೇಟೆ ಯಿಂದ ಆನಂದಪುರದ ಕಡೆ ಬರುವಾಗ ಹಾಗೂ ಕಾರು ಆನಂದಪುರದಿಂದ ರಿಪ್ಪನ್ ಪೇಟೆ ಗೆ ಹೋಗುವಾಗ ಬಸವನ ಕೊಪ್ಪದ ಬಳಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





