ಸಾಗರ : ತಾಲ್ಲೂಕಿನ ಆನಂದಪುರದ ಕೆಂಜಿಗಾಪುರದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಮಾರ್ಚ್ 2 ರಿಂದ ಮಾರ್ಚ್ 4 ರವರೆಗೆ ನಡೆಯಲಿದೆ.
ಮಾರ್ಚ್ 2 ರಂದು ಬೆಳಿಗ್ಗೆ 7ಕ್ಕೆ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ನಂತರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಶತರುದ್ರಾಭಿಷೇಕ ನಡೆಯಲಿದೆ.
ನಂತರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದ್ದು, ಶಾಸಕರಾದ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕರಾದ ಡಾ. ಪುರುಷೋತ್ತಮ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅಚಣೆ ಹಾಗೂ ರಥೋತ್ಸವ
ಮಾರ್ಚ್ 3 ರ ಬೆಳಿಗ್ಗೆ 6 ಕ್ಕೆ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಅಷ್ಟೋತ್ತರ ಸೇವೆ ನಡೆಯಲಿದೆ. ಬೆಳಿಗ್ಗೆ 7:30ಕ್ಕೆ ಮಂಗಳವಾದ್ಯ ವೀರಗಾಸೆಯೊಂದಿಗೆ ವೀರಭದ್ರೇಶ್ವರ ದೇವರ ಆಚರಣೆ ಹಾಗೂ ರಥೋತ್ಸವ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಕೋಣಂದೂರು ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಗುರುಗಾನ ಕಲಾವೃಂದಾ ಇವರಿಂದ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಬಟ್ಟೆ ಮಲ್ಲಪ್ಪ ಗುರುಕುಲ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಸಾರ್ವಜನಿಕರಿಗೆ ಮಹಾ ದಾಸೋಹ ಕಾರ್ಯಕ್ರಮ ಜರುಗಲಿದೆ
ವಿಶೇಷ ಸೂಚನೆ
ಮಾರ್ಚ್ 3ರಂದು ಗ್ರಹಣ ಇರುವುದರಿಂದ ಕೆಂಜಿಗಾಪುರದ ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.





