ಸಾಗರ : ತಾಲ್ಲೂಕಿನ ಆನಂದಪುರದ ಇತಿಹಾಸ ಪ್ರಸಿದ್ಧ ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಆನಂದಪುರ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ದೀಪ ಬೆಳಗಿಸಿದರು.

ದೇವಿಯ ದರ್ಶನ ಪಡೆದ ಶಾಸಕ ಗೋಪಾಲಕೃಷ್ಣ ಬೇಳೂರು
ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಕಾರ್ತಿಕ ಮಹೋತ್ಸವದ ಅಂಗವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ದೇವಾಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಮಾರಿಕಾಂಬ ದೇವಿಯ ತವರು ಮನೆ ಶಿಲಾಮಯ ದೇವಸ್ಥಾನಕ್ಕೆ 20 ಲಕ್ಷ ಅನುದಾನವನ್ನು ನೀಡುತ್ತೇನೆ. ಹಾಗೂ ಮಾರಿಕಾಂಬ ದೇವಿಯ ಮುಂಭಾಗ ರಸ್ತೆ ನಿರ್ಮಾಣವನ್ನು ಮುಂಬರುವ ಮಾರಿಕಾಂಬ ಜಾತ್ರೆ ಒಳಗೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬೇಕಿದ್ದಲ್ಲಿ ನೀಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ್, ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಸೇರಿದಂತೆ ಜಾತ್ರಾ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇





