ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕೆಳದಿ ಅರಸರ ಆಡಳಿತ ಅವಿಸ್ಮರಣೀಯ – ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ The rule of the Keladi kings is unforgettable – Mallikarjuna murugarajendra swamiji.

On: November 13, 2025 11:39 AM
Follow Us:
---Advertisement---

ಸಾಗರ : ಕರ್ನಾಟಕದ ಇತಿಹಾಸದಲ್ಲಿ ಕೆಳದಿ ಅರಸರ ಆಡಳಿತ ಅವಿಸ್ಮರಣೀಯ ಎಂದು ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಅವರು ತಾಲ್ಲೂಕಿನ ಆನಂದಪುರ ಸಮೀಪದ ಮಹಂತಿನ ಮಠದಲ್ಲಿ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.shivakumar swamiji

ಆಡಳಿತ ತಜ್ಞರದಂತಹ ಕೆಳದಿ ಅರಸರಾದ ಶಿವಪ್ಪ ನಾಯಕ, ಕೆಳದಿ ರಾಣಿ ಚೆನ್ನಮ್ಮ, ವೆಂಕಟಪ್ಪ ನಾಯಕರ ಆಡಳಿತದಲ್ಲಿ ಸಾಮಾಜಿಕ ಕಳಕಳಿ ಸರ್ವಧರ್ಮ ಸಹಿಷ್ಣುತೆ ಎದ್ದು ಕಾಣುತ್ತಿತ್ತು. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ ಅವರ ಆಡಳಿತಕ್ಕಿಂತ, ಕೆಳದಿ ರಾಣಿ ಚೆನ್ನಮ್ಮನ ಆಡಳಿತ ಅತ್ಯಂತ ಅವಿಸ್ಮರಣೀಯವಾದುದು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿಯೇ ಜನರ ವ್ಯಾಪಾರದ ಮಾರ್ಗದರ್ಶನ, ಹಿತದೃಷ್ಟ ಹಾಗೂ ವ್ಯಾಪಾರದ ಅನುಕೂಲಕ್ಕಾಗಿ ಇಂತಹ ಮಹಂತಿನ ಮಠಗಳನ್ನು ಸ್ಥಾಪನೆ ಮಾಡಿದ್ದರು.

ಕೆಳದಿ ಅರಸ ರಾಜ ವೆಂಕಟಪ್ಪ ನಾಯಕನ ಕಾಲದಲ್ಲಿ ನಿರ್ಮಾಣಗೊಂಡಂತಹ ಈ ಮಹಂತಿನ ಮಠ ಈಗ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಈ ಸುಂದರ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಹಾಗೂ ಪ್ರವಾಸಿಗರನ್ನು  ಸೆಳೆಯುವ ದೃಷ್ಟಿಯಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸುಂದರವಾದ ಚಂಪಕ ಸರಸು ಇರುವುದರಿಂದ ತೆಪ್ಪೋತ್ಸವ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜನೆ ಮಾಡುವ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕದ ನಕ್ಷೆಯಲ್ಲಿ ಮಹಂತಿನ ಮಠ ಇತಿಹಾಸವಾಗಿ ಉಳಿಯಬೇಕಾದರೆ, ಸರ್ಕಾರದ ಸಹಾಯಕ್ಕೆ ಕಾಯದೆ ಸ್ಥಳೀಯರು, ಸಾರ್ವಜನಿಕರು ಹಾಗೂ ದಾನಿಗಳು ಹೆಚ್ಚಿನ ಸಹಕಾರ ನೀಡಬೇಕು. ಹೆಚ್ಚಿನ ಅಭಿವೃದ್ಧಿ ಆದಾಗ ಪ್ರವಾಸಿಗರ ಸಂಖ್ಯೆ ಹೆಚ್ಚುವುದಲ್ಲದೆ  ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದಗದ ನಂದವೇರಿ ಮಠದ ಶಿವಕುಮಾರ ಸ್ವಾಮೀಜಿ, ಮಹಂತಿನ ಮಠದ ಅಭಿವೃದ್ಧಿ ಟ್ರಸ್ಟ್ ಪ್ರಮುಖರಾದ ರಾಜು ಕೆ.ಆರ್, ಟಾಕಪ್ಪ, ರಾಜೇಂದ್ರ ಗೌಡ್ರು, ಗಜೇಂದ್ರ, ಶೇಖರಪ್ಪ, ಚಂದ್ರಕುಮಾರ್, ವೆಂಕಟೇಶ್, ಜ್ಞಾನೇಶ್ವರಪ್ಪ, ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment