ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿ ಮಂಜೂರಾತಿಗೆ ಗ್ರಾಮಸ್ಥರ ಆಗ್ರಹ. Villagers demand additional room allocation for government school.

On: October 16, 2025 10:14 AM
Follow Us:
---Advertisement---

ಗದಗ :  ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕು ಸಂಕದಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ವರ್ಗದ ಕೊಠಡಿಗಳನ್ನು ಮಂಜೂರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಉಪ ನಿರ್ದೇಶಕರಾದ  ಆರ್ ಎಸ್ ಬುರುಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.gadaga 1

ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, ಶಾಲೆಗೆ ಯಾವುದೇ ವಿಶಾಲವಾದ ನಿರ್ಧಿಷ್ಟ ಆಟದ ಮೈದಾನ ಇಲ್ಲ‌. ಇದಲ್ಲದೆ ಶಾಲೆಯ ಮುಂದೆ ಇರುವ ಸ್ವಲ್ಪ ಆವರಣದಲ್ಲೇ ಗ್ರಾಮದಲ್ಲಿ ಯಾವುದೇ ರೀತಿಯ ಬಸ್ ನಿಲ್ದಾಣದ ವ್ಯವಸ್ಥೆಯೂ ಸಹ ಇಲ್ಲದೆ ಇರುವುದರಿಂದ ಗ್ರಾಮಕ್ಕೆ ಬರುವ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ ಗಳು ಹಾಗೂ ಇತರೆ ಖಾಸಗಿ ವಾಹನಗಳು ಸಹ ಶಾಲೆಯ ಮೈದಾನದಲ್ಲೇ ನಿಲ್ದಾಣ ಮಾಡುವುದರ ಜೊತೆಗೆ ಅಲ್ಲೇ ರಿವರ್ಸ್ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಬಸ್ ಹಾಗೂ ಇತರೆ ಖಾಸಗಿ ವಾಹನಗಳು ನಮ್ಮ ಗ್ರಾಮದ ಶಾಲೆಯ ಸಣ್ಣ ಮೈದಾನ ಬಿಟ್ಟರೆ ಬೇರೆ ಯಾವುದೇ ರೀತಿಯ ವ್ಯವಸ್ಥೆ ಇರುವುದಿಲ್ಲ. ಹಾಗೆಯೇ ಈ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಸಹ ಸಾಧ್ಯವಿಲ್ಲ. ಹಾಗಾಗಿ ಈ ಶಾಲೆಯ ಮುಂದೆ ಇರುವ ಮೈದಾನದಲ್ಲಿ ಶಾಲೆಯ ವಿದ್ಯಾರ್ಥಿಗಳು ಆಟವಾಡಲು ಸಹ ತೊಂದರೆಯಾಗುತ್ತಿದೆ. ಮಕ್ಕಳು ಭಯದ ವಾತಾವರಣದಲ್ಲಿ ಶಾಲೆಗೆ ಬರುವಂತಹ ವ್ಯವಸ್ಥೆ ಜೊತೆಗೆ ಮಕ್ಕಳಿಗೆ ಯಾವ ಸಮಯದಲ್ಲಿ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗ್ರಾಮದ ರೈತರಾದ ಶ್ರೀ ಬಕಾರಿ ಮನೆತನದವರು ಸರ್ಕಾರಿ ಶಾಲೆಗೆ 20 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದು ಇರುತ್ತದೆ. ಹಾಗಾಗಿ ಶಾಲೆಗಾಗಿ ದಾನವಾಗಿ ಜಮೀನು ನೀಡಿರುವುದರಿಂದ ಈ ಹೊಲದಲ್ಲಿ ನಮ್ಮ ನಮ್ಮ ಗ್ರಾಮಕ್ಕೆ ವರ್ಗದ ಕೊಠಡಿಗಳನ್ನು ಮಂಜೂರಾತಿ ಮಾಡುವುದರ ಮೂಲಕ ವಿದ್ಯಾರ್ಥಿಗಳ ಹಿತರಕ್ಷಣೆ ಕಾಪಾಡಬೇಕೆಂದು ಸಂಕಧಾಳ ಗ್ರಾಮಸ್ಥರ ಒಕ್ಕೊರಲ ಅಭಿಪ್ರಾಯವಾಗಿದೆ.

ಹಿರಿಯರಾದ ಪಕ್ಕೀರಯ್ಯ ಹಿರೇಮಠ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ದುರಗಪ್ಪ ಹರಿಜನ, ನೀಲನಗೌಡ ಪಾಟೀಲ, ಹಾಲಪ್ಪ ಸೂರಣಗಿ, ಎಸ್.ಡಿ ಎಂ ಸಿ ಅಧ್ಯಕ್ಷರಾದ ರವಿ ಹರಿಜನ, ಶರೀಫ್ ಹರಿಜನ ಹಾಗೂ ಗ್ರಾಮದ ವಕೀಲರಾದ ಮೈಲಾರಪ್ಪ ದುರಗಪ್ಪ ಹರಿಜನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment