ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಗ್ರಾಮ ಪಂಚಾಯಿತಿ ನೆಲಬಾಡಿಗೆ ಮಳಿಗೆ ಖಾಲಿ ಮಾಡಲು ಆದೇಶ

On: July 24, 2025 2:52 PM
Follow Us:
---Advertisement---

ಸಾಗರ : ತಾಲ್ಲೂಕಿನ ಆನಂದಪುರ ಗ್ರಾಮ ಪಂಚಾಯಿತಿ ಅಧಿನದಲ್ಲಿರುವ ನೆಲ ಬಾಡಿಗೆ ಮಳಿಗೆ ತೊರೆಯುವಂತೆ ಆದೇಶ ನೀಡಲಾಗಿದೆ.

ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 62 ನೆಲಮಳಿಗೆ ಅಂಗಡಿಗಳಿವೆ. ಈ ಅಂಗಡಿಗಳು ಅನಧಿಕೃತ ಅಧಿಭೋಗದಲ್ಲಿ ಇರುವುದರಿಂದ ಖಾಲಿ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ನೀಡಿದ್ದಾರೆ.

ಸಾಗರ ತಾಲೂಕು ಆನಂದಪುರ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ನೆಲ ಬಾಡಿಗೆ ಮಳಿಗೆಗಳು ಅನಧಿಕೃತ ಅಧಿಭೋಗದಲ್ಲಿ ಇರುತ್ತೀರೆಂದು ಮನದಟ್ಟಾಗಿರುತ್ತದೆ. ಆದ್ದರಿಂದ ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರ ಹಾಕುವ) ಅಧಿನಿಯಮ, 1974 ರ 5 ನೇ ಪ್ರಕರಣದ (1) ಮತ್ತು (2) ನೇ ಉಪಪ್ರಕರಣದನ್ವಯ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : RDPR/39/GPS/2021  ದಿನಾಂಕ 14.01.2022ರ ಮೇರೆಗೆ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಆವರಣದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಅಧಿಭೋಗದಲ್ಲಿರುವ ಎಲ್ಲಾ ವ್ಯಕ್ತಿಗಳು ಈ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗೆ ಸದರಿ ಆವರಣವನ್ನು ಖಾಲಿ ಮಾಡಬೇಕೆಂದು ನಾನು ಈ ಮೂಲಕ ಆದೇಶ ಮಾಡಿದ್ದೇನೆ ಎಂದು ನೋಟಿಸ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಸಂಬಂಧ ಮೇಲೆ ನಿರ್ದಿಷ್ಟ ಪಡಿಸಿದ ಅವಧಿ ಒಳಗಾಗಿ ಈ ಆದೇಶವನ್ನು ಪಾಲಿಸಲು ನಿರಾಕರಿಸಿದ ಅಥವಾ ತಪ್ಪಿದ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳನ್ನು ಆವರಣದಿಂದ ಹೊರ ಹಾಕಬಹುದು ಮತ್ತು ಸ್ವಾಧೀನ ಪಡಿಸಿಕೊಳ್ಳಬಹುದು. ಆ ಉದ್ದೇಶಕ್ಕಾಗಿ ಅವಶ್ಯವಾಗಬಹುದಾದಷ್ಟು ಬಲಪ್ರಯೋಗದ ಮೂಲಕ ಹೊರ ಹಾಕುವಿಕೆಗೆ ಗುರಿಯತಕ್ಕದ್ದು ಎಂದು ಉಲ್ಲೇಖ ಮಾಡಿದ್ದಾರೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಹರಾಜು ಪ್ರಕ್ರಿಯೆ ಇನ್ನಾದರೂ ನಡೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಹರಾಜು ಪ್ರಕ್ರಿಯೆ ನಡೆದಿದ್ದೇ ಆದಲ್ಲಿ ಗ್ರಾಮ ಪಂಚಾಯಿತಿಯ ಆದಾಯ ಹೆಚ್ಚಾಗುವುದರ ಮೂಲಕ ನಮ್ಮ ಊರ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

gram panchayat

 

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment