ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಗಮನಹರಿಸಲಿ – Tourism Department should focus on developing historical sites

On: July 19, 2025 1:35 PM
Follow Us:
---Advertisement---

ಸಾಗರ : ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವತ್ತ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ವಕೀಲ ಮಂಜುನಾಥ್ ಆಗ್ರಹಿಸಿದರು.

ಮಾದರ ಚೆನ್ನಯ್ಯ ಜಯಂತಿ ಅಂಗವಾಗಿ ಅವರು ಸಾಗರ ತಾಲ್ಲೂಕಿನ ಆನಂದಪುರ ಸಮೀಪವಿರುವ ಮಹಾಂತಿನ ಮಠ ಚಂಪಕ ಸರಸ್ಸು ನಲ್ಲಿ ಬಾಗಿನ ಸಮರ್ಪಿಸಿ ಮಾತನಾಡಿದರು.baagina

ಮಾದರ ಚೆನ್ನಯ್ಯ ಜಯಂತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಮಾರ್ಗ ಮಧ್ಯದಲ್ಲಿ ಬರುವ ಮಹಂತಿನಮಠ ಚಂಪಕಸರಸ್ಸು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ  ಬಾಗಿನ ಸಮರ್ಪಿಸಿದರು.

champaka

ಇತಿಹಾಸ ಸಾರುವ ಇಂತಹ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ಇಂತಹ ಪ್ರೇಕ್ಷಣೀಯ ಸ್ಥಳದಲ್ಲಿ ದೊರಕುವ ಇತಿಹಾಸ ಜ್ಞಾನಾರ್ಜನೆಗೆ  ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಹೇಳಿದರು.

ಇಂತಹ ಐತಿಹಾಸಿಕ ಸ್ಥಳವನ್ನು ಯಶ್ ಅವರ ಯಶೋಮಾರ್ಗದಿಂದ ಅಭಿವೃದ್ಧಿಪಡಿಸಿರುವುದು ಸಂತಸದ ವಿಷಯವಾಗಿದೆ. ಇತಿಹಾಸ ಸಾರುವ ಇಂತಹ ಸ್ಥಳಗಳನ್ನು ಸಾರ್ವಜನಿಕರು ಸಂಘ ಸಂಸ್ಥೆಗಳು ಕಟ್ಟಿ ಬೆಳೆಸಿಕೊಂಡು ಹೋಗುವ ಅಗತ್ಯತೆ ಇದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವಲ್ಲಿ ತನು ಧನ ಮನ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು. basavanna

ಮಲೆನಾಡಿನಲ್ಲಿ ಹತ್ತಾರು ಪ್ರವಾಸಿ ಸ್ಥಳಗಳಿದ್ದು, ವಿಶ್ವ ವಿಖ್ಯಾತ ಜೋಗ ಜಲಪಾತ , ಸಿಗಂದೂರು, ಭೀಮೇಶ್ವರ ಮುಂತಾದ ಸ್ಥಳಗಳಿಗೆ ಪ್ರಯಾಣಿಸುವಾಗ ಈ ಐತಿಹಾಸಿಕ ಮಹಾಂತಿನ ಮಠ ಸಿಗುವುದರಿಂದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ.

ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ಹರಿಸಬೇಕು. ಪ್ರಮುಖವಾಗಿ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಿದರೆ ಇಂತಹ ಐತಿಹಾಸಿಕ ಸ್ಥಳಗಳು ತನ್ನಿಂದ ತಾನೇ ಅಭಿವೃದ್ಧಿಯಾಗುತ್ತಾ ಹೋಗುತ್ತವೆ. ಜೊತೆಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿಯೂ ಸಹ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.mahanthi 1

ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಪ್ರವಾಸಿಗರಿಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಬೇಕು. ಇದರಿಂದ ಸ್ಥಳೀಯವಾಗಿ ಸಹ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಇಲ್ಲಿನ ಆರ್ಥಿಕ ಬೆಳವಣಿಗೆಗೂ ಸಹ ಸಹಕಾರಿಯಾಗಲಿದೆ.mahanthi 2

ಈ ಸಂದರ್ಭದಲ್ಲಿ ಮೈಲಾರಪ್ಪ, ಮುತ್ತಣ್ಣ, ಚಂದ್ರು ದೊಡ್ಮನೆ ಗದಗ, ಮೂರ್ತಿ , ಬೈಲಪ್ಪ ದೊಡ್ಡೇರಿ ನೆಲಮಂಗಲ, ದೇವರಾಜು ಮೈಸೂರು, ಸತೀಶ್ ಹುಣಸೂರು, ಮಾರುತಿ, ವಿಶ್ವನಾಥ, ಮುತ್ತಪ್ಪ ಮೇಗೆರೆ, ಶಿವರಾಜ್, ನಟೇಶ್ ಪಿರಿಯಾಪಟ್ಟಣ,  ಉದಯ್, ಗುಡವಿ ಸ್ವಾಮಿ, ರವಿಕುಮಾರ್ , ಜಗನ್ನಾಥ್ ಇನ್ನಿತರರು ಉಪಸ್ಥಿತರಿದ್ದರು.

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment