ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಸಿಗಂದೂರು : ಕಟ್ಟಾದ ಲಾಂಚ್ ನ ಸ್ಟೇರಿಂಗ್ ಲಾಕ್ -ಕೆಲ ಸಮಯ ಸೃಷ್ಟಿಸಿದ ಆತಂಕ

On: July 3, 2025 5:39 PM
Follow Us:
---Advertisement---

ಸಾಗರ : ಶರಾವತಿ ಹಿನ್ನೀರಿನ ಹೊಳೆಬಾಗಿಲು ಭಾಗದಿಂದ ಅಂಬಾರಗೋಡ್ಲು ತಟ್ಟದತ್ತ ಸಾಗುತ್ತಿದ್ದ ಲಾಂಚ್ ಸ್ಟೇರಿಂಗ್ ಲಾಕ್ ತುಂಡಾದ ಪರಿಣಾಮ ಕೆಲಸ ಸಮಯ ಪ್ರಯಾಣಿಕರಿಗೆ ಆತಂಕದ ವಾತಾವರಣ ನಿರ್ಮಾಣವಾಯಿತು.20250703 230532

ಅಂಬಾರಗೋಡ್ಲು ತೀರಕ್ಕೆ ಹಲವು ವಾಹನ ಹಾಗೂ ಜನರನ್ನು ಹೊತ್ತು ಬರುತ್ತಿದ್ದ ಲಾಂಚ್ ಏಕಾಏಕಿ ಲಾಕ್ ತುಂಡಾದ ಪರಿಣಾಮ ಈ ಘಟನೆ ನಡೆದಿದೆ. ಈ ವೇಳೆ ಚಾಲಕ ನಿಯಂತ್ರಣ ಇಲ್ಲದೆ ಲಾಂಚ್, ಗಾಳಿಯಲ್ಲಿ ದಿಕ್ಕು ಬದಲಾಯಿಸಿ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದರು.

 ಸಹಾಯ ಮಾಡಿದ ಸೇತುವೆ ನಿರ್ಮಾಣದ ದಿಲೀಪ್ ಕಂಪನಿ

ಘಟನೆ ನಡೆದ ತಕ್ಷಣ ಸೇತುವೆ ನಿರ್ಮಾಣದ ದಿಲೀಪ್ ಕಂಪನಿಯನ್ನು ಸಂಪರ್ಕಿಸಿದ ಲಾಂಚ್ ಸಿಬ್ಬಂದಿ ಬೋಟ್ ಸಹಾಯದಿಂದ ದಿಕ್ಕು ತಪ್ಪಿದ ಲಾಂಚ್ ನ್ನು  ಕಟ್ಟಿ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಂಚ್ ನಲ್ಲಿ ಬ್ಯಾಕೋಡು, ಸುಳ್ಳಳ್ಳಿ, ಸಿಗಂದೂರು ಭಾಗದಿಂದ ಸಾಗರಕ್ಕೆ ತೆರಳುತ್ತಿದ್ದ ಬಸ್ಸು ಸೇರಿದಂತೆ 45 ಪ್ರಯಾಣಿಕರು ಇದ್ದರು. ಘಟನೆಯಿಂದ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

 

 

Join WhatsApp

Join Now

Join Telegram

Join Now

Leave a Comment