ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಸಂಚಾರಕ್ಕೆ ಸಿದ್ಧಗೊಂಡ ಸಿಗಂದೂರು ಸೇತುವೆ – ದ್ವೀಪದ ಜನರ ಕನಸು ನನಸು siganduru bridge ready for traffic – Island people’s dream

On: July 13, 2025 11:19 AM
Follow Us:
---Advertisement---

ಸಾಗರ : ದೇಶದ ಅತಿ ಉದ್ದದ 2 ಸೇತುವೆಯಾದ ಅಂಬಾರಗೋಡ್ಲು – ಕಳಸವಳ್ಳಿ ಸೇತುವೆ ನಿರ್ಮಾಣವಾಗಿ ಉದ್ಘಾಟನೆ ಸಿದ್ಧಗೊಂಡಿದ್ದು 6 ದಶಕಗಳ ಹೋರಾಟದ ಪ್ರತಿರೂಪವೇ ಸೇತುವೆಯಾಗಿ ತಲೆಎತ್ತಿ ನಿಂತಿದೆ.

ಜುಲೈ 14 2025 ನೂತನ ಸೇತುವೆ ಉದ್ಘಾಟನೆ

ಈ ನೂತನ ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇದೇ ತಿಂಗಳು ಜುಲೈ 14ರಂದು ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ.by Raghavendra

ನಾಡಿಗೆ ವಿದ್ಯುತ್ ನೀಡುವ ಉದ್ದೇಶದಿಂದ 1964 ರಲ್ಲಿ  ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಮ್ ಕಟ್ಟಿದಾಗ,  ಸುಮಾರು 70 ಕಿಲೋ ಮೀಟರ್ ಗಳಷ್ಟು ಭಾಗ ಮುಳುಗಡೆ ಯಾಗುತ್ತದೆ.  ಜೊತೆಗೆ 6,000 ಕುಟುಂಬಗಳಷ್ಟು ನಿರಾಶಿತರಾಗುತ್ತಾರೆ. ಶರಾವತಿ ಹಿನ್ನೀರಿನ ಪರಿಣಾಮವಾಗಿ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡವು. ಇದರಿಂದ ಕರೂರು ಬಾರಂಗಿ ಹೋಬಳಿಯ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾದರು.

ಶರಾವತಿ ಹಿನ್ನೀರಿನ ಪರಿಣಾಮವಾಗಿ 2 ಕಿ.ಮೀ ಅಂತರದ ದಡ ಸೇರಲಾಗದೇ ಸಾಗರದ ಕೇಂದ್ರ ಸ್ಥಾನಕ್ಕೆ ತಲುಪಬೇಕಾದರೆ ನೂರಾರು ಕಿಲೋ ಮೀಟರ್ ಸುತ್ತು ಹೊಡೆದು ಬರುವಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು.

ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಅಂಬಾರಗೋಡ್ಲು ಕಳಸವಳ್ಳಿ ದಡಕ್ಕೆ ಲಾಂಚ್ ವ್ಯವಸ್ಥೆ ಮಾಡಲಾಯಿತು. ಆದರೆ ಈ ಲಾಂಚ್ ಸಂಜೆ 6 ರ ನಂತರ ಕಾರ್ಯನಿರ್ವಹಿಸುತ್ತಿರುವ ಇಲ್ಲ. ಇದು ದ್ವೀಪದ ಜನರ ಆರೋಗ್ಯ ಸಮಸ್ಯೆ ಮುಂತಾದ ಸಂಧಿಗ್ಧ ಪರಿಸ್ಥಿತಿಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು. ಅಂದು ಆರಂಭವಾದ ಹೋರಾಟದ ಫಲವೇ ಸಿಗಂದೂರು ಸೇತುವೆಯಾಗಿದೆ.siganduru bridge w

ಭಾರತದ ಎರಡನೇ ಅತಿ ಉದ್ದದ ಸೇತುವೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಿರ್ಮಾಣವಾದ ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿದೆ. ಗುಜರಾತ್ ನ ದ್ವಾರಕದಲ್ಲಿ ನಿರ್ಮಿಸಲಾಗಿರುವ 2.3 ಕಿಲೋಮೀಟರ್ ಉದ್ದದ ಕೇಬಲ್ ಸೇತುವೆ  ದೇಶದ ಅತಿ ಉದ್ದನೆಯ ಸೇತುವೆಯಾಗಿದೆ.  ಇದು 979 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಓಖಾ ಮತ್ತು ಬೇಯ್ತ್ ದ್ವಾರಕ ದೀಪಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. ಈ ಸೇತುವೆಗೆ ಮೊದಲು ಸಿಗ್ನೇಚರ್ ಬ್ರಿಡ್ಜ್ ಎಂದು ಕರೆಯಲಾಗಿತ್ತು ನಂತರ ಸುದರ್ಶನ ಸೇತುವೆ ಎಂದು ಮರು ನಾಮಕರಣ ಮಾಡಲಾಯಿತು. ಈ ಸೇತುವೆನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 2024ರಲ್ಲಿ ಉದ್ಘಾಟನೆ ಮಾಡಿದರು.siganduru 1

470 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ 2018 ಫೆಬ್ರವರಿ 19 ರಂದು ಶಂಕುಸ್ಥಾಪನೆಯಾದ ಈ ಸೇತುವೆಯನ್ನು 470 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಬಿ ಎಸ್  ಯಡಿಯೂರಪ್ಪನವರ ಇಚ್ಛಾಶಕ್ತಿಗೆ ಗಡ್ಕರಿ ನೆರವು

ನಾಡಿಗೆ ಬೆಳಕು ಕೊಟ್ಟ ಶರಾವತಿ ಹಿನ್ನೀರಿನ ಸಂತ್ರಸ್ತರ ಬವಣೆ ನೀಗಿಸಲು ಪಣತೊಟ್ಟು ಅವರ ಪ್ರಯತ್ನದ ಫಲವಾಗಿ 14.07.2025 ರಂದು ಲೋಕಾರ್ಪಣೆಯಾಗುತ್ತಿದೆ. ನಿತಿನ್ ಗಡ್ಕರಿಯವರಿಗೆ  ಅಂಬಾರಗೋಡ್ಲು ಕಳಸವಳ್ಳಿ ಸೇತುವೆಯ ನಿರ್ಮಾಣದ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ ಪರಿಣಾಮವಾಗಿ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾಗುವುದರ ಜೊತೆಗೆ  603 ಕೋಟಿಗಳಷ್ಟು ಅನುದಾನವನ್ನು 2017- 18 ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಸೇರಿಸಿ ಮಂಜೂರು ಮಾಡಿದರು.bsy gadkari

ಸಂಸದ ಬಿ. ವೈ ರಾಘವೇಂದ್ರ ಅವರ ಪ್ರಯತ್ನದ ಫಲ ಸಿಗಂದೂರು ಸೇತುವೆ

ಸಂಸದರಾಗಿದ್ದ ಬಿವೈ ರಾಘವೇಂದ್ರ ಅವರು ಕೇಂದ್ರ ಅರಣ್ಯ ಸಚಿವರಿಗೆ ದ್ವೀಪದ ಜನರಿಗೆ ಸೇತುವೆ ಅಗತ್ಯತೆ ಬಗ್ಗೆ ಮನವರಿಕೆ ಮಾಡಿ, ಅರಣ್ಯ ಭೂಮಿ ಬಿಡುಗಡೆ ಹಾಗೂ ಕೆಪಿಸಿ ನಿರಾಕ್ಷೇಪಣಾ ಪತ್ರದ ದಾಖಲೆಗಳೊಂದಿಗೆ ಸತತ ಪ್ರಯತ್ನದ ಫಲವಾಗಿ ಸೇತುವೆ ನಿರ್ಮಾಣವಾಗಿದೆ.Raghavendra gadkari

ಸೇತುವೆ ನಿರ್ಮಾಣದಿಂದ ದ್ವೀಪದ ಸಂತ್ರಸ್ತರ ಸಮಸ್ಯೆಗಳಿಗೆ ಮುಕ್ತಿ

ಅಂಬಾರಗೋಡ್ಲು ಕಳಸವಳ್ಳಿ  ಸೇತುವೆ ನಿರ್ಮಾಣದಿಂದ ಸಂಪರ್ಕ, ಶಿಕ್ಷಣ, ಆರೋಗ್ಯ ಉದ್ಯೋಗ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಸ್ವಾವಲಂಬಿ ಜೀವನ, ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿ ಇನ್ನು ಮುಂತಾದ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ನಿರ್ಮಾಣಗೊಂಡ ಅಂಬಾರಗೋಡ್ಲು – ಕಳಸವಳ್ಳಿ  ಸೇತುವೆ ವಿಶೇಷತೆಗಳು 

  1.  ಟೆಂಡರ್ ಮೊತ್ತ 473 ಕೋಟಿ
  2. ಕಾಮಗಾರಿ ಪ್ರಾರಂಭ ದಿನಾಂಕ 12.12.2019
  3. ಕಾಮಗಾರಿ ಮುಕ್ತಾಯ ದಿನಾಂಕ 14.7.2025
  4. ಕಾಮಗಾರಿ ನಿರ್ವಹಿಸಿದ ಏಜೆನ್ಸಿ -ದಿಲೀಪ್ ಬಿಲ್ಡ್ ಕಾನ್
  5. ಸೇತುವೆ ಉದ್ದ 2125 ಮೀಟರ್
  6. ಸೇತುವೆಯ ಅಗಲ 16 ಮೀಟರ್ (ಜೊತೆಗೆ ಫುಟ್ ಪಾತ್ 2*1.5 ಮೀಟರ್
  7. ಸಂಪರ್ಕ ರಸ್ತೆ -1.05 ಕಿ.ಮೀ ನಿಂದ 3 ಕಿ. ಮೀ

8.  ತಳಪಾಯ 164 ಪೈಲ್ಸ್

ಒಟ್ಟಾರೆಯಾಗಿ ಸ್ಥಳೀಯರ ಹೋರಾಟ ಹಾಗೂ ಹಲವು ನಾಯಕರ ಪ್ರಯತ್ನದ ಫಲವಾಗಿ ದ್ವೀಪದ ಜನರ ಕನಸು ನನಸಾಗುತ್ತಿರುವುದು ಸಂತಸದ ವಿಷಯವಾಗಿದೆ.

 

 

 

 

 

 

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಆನಂದಪುರದ ವಿದ್ಯುತ್ ವಿತರಣಾ ಕೇಂದ್ರ ತುರ್ತು ನಿರ್ವಹಣೆ – ವಿದ್ಯುತ್ ವ್ಯತ್ಯಯ – Anandapura Power Distribution center emergency management – power outage

ಸಾಗರವನ್ನು ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಶಾಸಕ ಗೋಪಾಲಕೃಷ್ಣ ಬೇಳೂರು MLA Gopalakrishna Belur wrote a letter to chief minister siddaramaiah to make Sagara taluk a district.

ಅಕ್ರಮ ದನ ಸಾಗಾಟ – ಇಬ್ಬರ ಬಂಧನ – ಗೋವುಗಳ ರಕ್ಷಣೆ Illegal cattle smuggling – TWo arrested – Cow protection

ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ Date set for Kadlehanklu Marikamba Devi’s festival

ಉತ್ತಮ ಸಮಾಜ ಕಟ್ಟಲು ಯುವ ಪಿಳಿಗೆ ಸದೃಢರಾಗಬೇಕು -ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ -The younger generation must become strong to build a better society

ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ – ಆರೋಪಿಗಳ ಪರವಾಗಿ ಬಂದ ತೀರ್ಪು – Police station assault case – verdict in favor of the accused

Leave a Comment