ಸಾಗರ : ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ಸಿಗಂದೂರು ಸೇತುವೆ ಉದ್ಘಾಟನೆಗೆ ಮಾಜಿ ಸಚಿವ ಹರತಾಳು ಹಾಲಪ್ಪರವನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಮನವಿ ಮಾಡಿದ್ದಾರೆ.
ಜನರ ಬಹುದಿನದ ಕನಸಾದ ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ಜುಲೈ 14 ರಂದು (ನಾಳೆ) ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯವಾಗಿದೆ. ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ.
ಆದರೆ ಸೇತುವೆ ನಿರ್ಮಾಣ ಆಗುವಲ್ಲಿ 3 ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಶ್ರಮವು ಸಹ ಇದೆ. ಹಿಂದೆ ದೋಣಿ ದುರಂತದಲ್ಲಿ ಸುಮಾರು 22 ಜನ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಆಗಲೇ ಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹಾಗೂ ಯಡಿಯೂರಪ್ಪ ಜೊತೆ ನಿರಂತರ ಚರ್ಚೆ ಹೋರಾಟದ ಫಲವಾಗಿ ಸೇತುವೆಯಾಗಿ ತಲೆಎತ್ತಿ ನಿಂತಿದೆ.
ಇದಲ್ಲದೆ ಸೇತುವೆ ನಿರ್ಮಾಣವಾಗಲು ಕೆಪಿಸಿಯಿಂದ NOC ಪತ್ರ ಬೇಕಾಗಿತ್ತು. ಪತ್ರ ಪಡೆಯಲು ಶಕ್ತಿ ಭವನದ ಎದುರು ಏಕಾಂಗಿ ಹೋರಾಟ ಮಾಡಿದ ಪರಿಣಾಮವಾಗಿ ಎಂ.ಡಿ NOC ನೀಡಿದ್ದರು. ಇವೆಲ್ಲ ಹೋರಾಟಗಳನ್ನು ಪರಿಗಣಿಸಿ ಪ್ರೋಟೋಕಾಲ್ ಪ್ರಕಾರ ಆಹ್ವಾನ ನೀಡದಿದ್ದರೂ ವಿಶೇಷ ಆಹ್ವಾನಿತರಾಗಿ ಗೌರವಿತವಾಗಿ ಯಾರದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಅವರನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿದರು.