ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಸಿಹಿ ಸುದ್ದಿ ದೊರಕಿದೆ.
ಹಲವು ವರ್ಷಗಳ ಹೋರಾಟದ ಫಲ ಹಾಗೂ ಕನಸು ನನಸಾಗುವ ಸಮಯ ಬಂದಿದೆ. ಈಗಾಗಲೇ ಸೇತುವೆ ಕಾರ್ಯ ಸಂಪೂರ್ಣ ಮುಗಿದಿದ್ದು, ಸಾಮರ್ಥ್ಯದ ಪರೀಕ್ಷೆಯಲ್ಲೂ ಪಾಸಾಗಿದ್ದು ಉದ್ಘಾಟನೆಗೆ ದಿನಾಂಕ ಒಂದು ನಿಗದಿ ಆಗಬೇಕಾಗಿದೆ.
ಉದ್ಘಾಟನೆಯ ದಿನಾಂಕ ಅಧಿಕೃತವಾಗಿ ನಿಗದಿಯಾಗಿಲ್ಲ- ಸಂಸದ ಬಿ ವೈ ರಾಘವೇಂದ್ರ
ಐತಿಹಾಸಿಕ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಳೆಯೂ ಸಹ ಜೋರಾಗಿ ಬರುತ್ತಿದ್ದು, ಸ್ಥಳ ಪರಿಶೀಲನೆ ನಡೆಸಿ ಪೂರ್ವಭಾವಿ ಸಭೆಯ ನಂತರ ದಿನಾಂಕ ನಿಗದಿಯಾಗಲಿದೆ ಎಂದು ಹೇಳಿದರು.
ಸಿಗಂದೂರು ಸೇತುವೆ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೂ ಸಹ ಆಹ್ವಾನ ನೀಡಲಾಗಿದ್ದು, ದಿನಾಂಕ ನಿಗದಿ ನಂತರ ಸಂಪೂರ್ಣ ವಿವರ ತಿಳಿಯಲಿದೆ ಎಂದು ಹೇಳಿದರು.
ರಾಜ್ಯ ಘಟಕದ ಅಧ್ಯಕ್ಷನಾಗಿ ಸಂಘಟನೆ ಬಲಪಡಿಸುವ ಕೆಲಸ ಮಾಡಿದ್ದೇನೆ – ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ.
ಕಳೆದ ಒಂದು ವರ್ಷದಿಂದ ರಾಜ್ಯ ಘಟಕದ ಅಧ್ಯಕ್ಷನಾಗಿ ಸಂಘಟನೆ ಬಲಪಡಿಸುವ ಕೆಲಸ ಮಾಡಿದ್ದೇನೆ. ಇದರ ಬಗ್ಗೆ ರಾಜ್ಯದ ಕಾರ್ಯಕರ್ತರಲ್ಲಿ ತೃಪ್ತಿ ಇದೆ. ಜೊತೆಗೆ ರಾಷ್ಟ್ರೀಯ ನಾಯಕರಲ್ಲೂ ಸಹ ತೃಪ್ತಿ ಇದೆ. ಹಾಗಾಗಿ ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಧಾರವನ್ನ ರಾಷ್ಟ್ರೀಯ ನಾಯಕರು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ನಮ್ಮ ಹೋರಾಟದ ಫಲವಾಗಿ ಮಂತ್ರಿಗಳು ರಾಜೀನಾಮೆ.
ನಮ್ಮ ಹೋರಾಟದ ಫಲವಾಗಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಮಂತ್ರಿಗಳು ರಾಜೀನಾಮೆ ಕೊಡಬೇಕಾಯಿತು. ನಿಷ್ಕಳಕ ರಾಜಕಾರಣಿ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಹ ಕೋಟಿ ಕೋಟಿ ಬೆಲೆ ಬಾಳುವ 14 ನಿವೇಶನಗಳನ್ನು ವಾಪಸ್ ನೀಡಬೇಕಾಯಿತು. ಇನ್ನು ಅನೇಕ ಭ್ರಷ್ಟಾಚಾರದ ಹಗರಣಗಳಿದ್ದು ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಬೆಳಕಿಗೆ ತರುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರಾದ ಗುರುಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು, ಆನಂದಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುರುರಾಜ್ ಮ್ಯಾಮ್ಕೋಸ್ ನಿರ್ದೇಶಕರಾದ ಭರ್ಮಪ್ಪ, ದಲಿತ ಮುಖಂಡರಾದ ರೇವಪ್ಪ ಹೊಸಕೊಪ್ಪ, ಪ್ರಮುಖರಾದ ವೀರೇಶ್ ಆಲವಳ್ಳಿ, ಮೋಹನ್, ಮೋಹನ್ ಸಿದ್ದೇಶ್ವರ ಕಾಲೋನಿ, ದೇವರಾಜ್, ನಾಗರಾಜ್ ,ಸದಾಶಿವ, ಹೊಳೆಯಪ್ಪ, ಮುರುಳಿ, ವೆಂಕಟೇಶ್, ಪ್ರಮೋದ್ ಇದ್ದರು.