ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುವಾಗ ಎಚ್ಚರವಿರಲಿ – ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ

On: September 26, 2025 1:27 PM
Follow Us:
---Advertisement---

ಸಾಗರ : ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುವಾಗ ಎಚ್ಚರವಿರಲಿ ಎಂದು ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ್ ಹೊನಗೋಡು ವಿರುದ್ಧ ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ವಾಗ್ದಾಳಿ ನಡೆಸಿದ್ದಾರೆ.

ಅವರು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಯಾವುದೇ ಆಧಾರವಿಲ್ಲದೆ ಸಾಗರದ ಪ್ರಥಮ ಪ್ರಜೆಯ ವಿರುದ್ಧ ಆರೋಪ ಮಾಡಬಾರದು. ಶಾಸಕರ ವಿರುದ್ಧ ನಿರಾಧಾರ ಆರೋಪ ಇಲ್ಲಿಗೆ ನಿಲ್ಲಬೇಕು ಎಂದು ಎಚ್ಚರಿಕೆ ನೀಡಿದರು.

ಶಾಸಕರು ತಮ್ಮ ವಿರುದ್ಧ ಇದ್ದವರಿಗೆ ಒತ್ತುವರಿ ಮಾಡಿಕೊಂಡವರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ, ಶಾಸಕರ ಕುಮ್ಮಕ್ಕಿನಿಂದ ನೋಟಿಸ್ ನೀಡಿ ಒಕ್ಕಲಿಬ್ಬಿಸುತ್ತಿದ್ದಾರೆ ಎಂಬ ಆರೋಪ ಮಾಡಿರುವ ರತ್ನಾಕರ್ ಹೊನಗೋಡು ಸಾಬೀತುಪಡಿಸಿದರೆ ಒಪ್ಪಿಕೊಳ್ಳುತ್ತೇವೆ ಎಂದು ಸವಾಲ್ ಹಾಕಿದರು.

ರಾಜಕಾರಣದಲ್ಲಿ ತಾನು ಅಸ್ತಿತ್ವದಲ್ಲಿ ಇದ್ದೇನೆ ಎಂದು ತೋರ್ಪಡಿಸುವ ಉದ್ದೇಶದಿಂದ ಆಗಾಗ ಪ್ರೆಸ್ ಮೀಟ್ ಮಾಡುತ್ತಿದ್ದಾರೆ. ಇವರ ಆರೋಪಕ್ಕೆ ಮೂಲ ಬಿಜೆಪಿ ಯಾವುದೇ ಮುಖಂಡರ ಬೆಂಬಲ ಇಲ್ಲ. ಕಾರಣ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಿದ್ದಾರೆ ಎಂದು ಲೇವಡಿ ಮಾಡಿದರು.

ವಿರೋಧಪಕ್ಷವಾಗಿ ತಪ್ಪಿರುವುದನ್ನು ಖಂಡಿಸುವುದು ಸರಿ. ಆದರೆ ಯಾವುದೇ ಸಾಕ್ಷಿಗಳಲ್ಲದೆ ಆರೋಪ ಮಾಡುವುದು ಸರಿಯಲ್ಲ. ಈ ಮೊದಲು ಕಾಂಗ್ರೆಸ್ಸಿನಲ್ಲಿ ಇದ್ದಾಗಲೂ ಸುಳ್ಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಗಣಪತಿ ಹಬ್ಬದಲ್ಲಿ ಅಭಿಮಾನಿಗಳಿಗಾಗಿ ಡ್ಯಾನ್ಸ್ ಮಾಡುವುದನ್ನು ಖಂಡಿಸುವುದು ಸರಿಯಲ್ಲ. ಮತಿಭ್ರಮಣೆ ಆಗಿರುವ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಸೋಮಶೇಖರ್ ಲ್ಯಾವಿಗೆರೆ ವಾಗ್ದಾಳಿಯ ಸಂಪೂರ್ಣ ವಿಡಿಯೋ 👇👇👇

 

ಶಿಕ್ಷಕರ ಸಮಸ್ಯೆ ಕೇವಲ ಸಾಗರ ಕ್ಷೇತ್ರದ ಸಮಸ್ಯೆ ಅಲ್ಲ, ರಾಜ್ಯದ ಸಮಸ್ಯೆ 

ಮಾಜಿ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಮಾತನಾಡಿ, ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ. ಈ ಸಮಸ್ಯೆ ಕೇವಲ ಸಾಗರ ಕ್ಷೇತ್ರದಲ್ಲಿ ಮಾತ್ರವಲ್ಲ. ಇದನ್ನು ಮೊದಲು ಬಿಜೆಪಿ ಮುಖಂಡರು ತಿಳಿದುಕೊಳ್ಳಬೇಕು.

ಶಾಸಕರು ಪ್ರಚಾರಕ್ಕೋಸ್ಕರ ಗಣಪತಿ ಹಬ್ಬಕ್ಕೆ ಹಣ ಹಾಗೂ ಟೀ ಶರ್ಟ್ ನೀಡುತ್ತಾರೆ ಎಂದು ಆರೋಪ ಮಾಡುವ ನೀವು, ಗಣಪತಿ ಹಬ್ಬದಲ್ಲಿ ಪ್ರೆಸ್ ಮೀಟ್ ಮಾಡಿ ಸಭೆ ಸೇರಿ ಹಣವನ್ನು ಗಣಪತಿ ಸಂಘಗಳಿಗೆ, ಆಯೋಜಕರಿಗೆ ಯಾಕೆ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ, ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಮುಲ್ಲಾ ಖಾನ್, ಪ್ರಮುಖರಾದ ಬಸವರಾಜ್, ಉಮೇಶ್, ಚೌಡಪ್ಪ, ಲೋಕೇಶ್, ಅಶ್ವಿನ್, ರಹಮತ್ ಉಲ್ಲಾ, ಆಸಿಫ್ ಇದ್ದರು.

ಚೇತನ್ ರಾಜ್ ಕಣ್ಣೂರ್

Join WhatsApp

Join Now

Join Telegram

Join Now

Leave a Comment