ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಬಾರದು -ಸಲಹೆ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು – Women should not be confined to the kitchen – MLA Gopalakrishna Belur advises

On: September 20, 2025 1:24 PM
Follow Us:
---Advertisement---

ಸಾಗರ : ಹೆಣ್ಣು ಮಕ್ಕಳು ಅಡುಗೆ ಮನೆಯಿಂದ ಹೊರ ಬಂದಾಗ ಮಾತ್ರ ದೇಶದ ಆಗುಹೋಗುಗಳ ಬಗ್ಗೆ ಹಾಗೂ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

 

ಅವರು ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಸಂಕೀರ್ಣವನ್ನು ಉದ್ಘಾಟನೆ ಮಾಡಿ ಮಹಿಳಾ ಗ್ರಾಮ ಸಭೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಗ್ರಾಮ ಸಭೆಗೆ ಬರುವುದರಿಂದ ಸರ್ಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ ಸಿಗುತ್ತದೆ. ಪಂಚಾಯಿತಿಯಿಂದ ಸಿಗುವ ಅನುದಾನ ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ 51% ರಷ್ಟು ಮೀಸಲಾತಿ ನೀಡಿದ್ದು, ಸಬಲತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಸುದ್ದಿಯ ಸಂಪೂರ್ಣ ವಿಡಿಯೋ  👇👇

ಶ್ರೀ ಶಕ್ತಿ ಸಂಘಗಳಿಗೆ, ಮಹಿಳಾ ಸಹಕಾರ ಸಂಘಗಳಿಗೆ ಸರ್ಕಾರದಿಂದ ಕೇವಲ 3 ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬಹುದು ಎಂದು ತಿಳಿಸಿದರು. ಸಹಕಾರ ಸಂಘಗಳ ಮೂಲಕ ಮಹಿಳೆಯರು ಸಬಲೀಕರಣ ಹೊಂದಿ ಕುಟುಂಬವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.Gopalakrishna Belur mla

 

ಉದ್ಯೋಗ ಖಾತ್ರಿ ಸೇರಿದಂತೆ ಮೊದಲಾದ ಯೋಜನೆಗಳಿಗೆ ಕೇಂದ್ರದ ಹಣ ಬರುತ್ತಿಲ್ಲ. ಇದರಿಂದಾಗಿ ಕೇವಲ ರಾಜ್ಯ ಸರ್ಕಾರದ ಅನುದಾನದಿಂದ ಹೆಚ್ಚಿನ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಆಗುತ್ತಿಲ್ಲ.

beluru yadehalli gp 1

ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಹೆಚ್ಚಿನ ಗಮನ ಹರಿಸಬೇಕು. ಏಕೆಂದರೆ ಕಳೆದ ಬಾರಿ ಹಳ್ಳಿ ಹಳ್ಳಿಗಳಲ್ಲಿ ಡೆಂಗಿ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯನ್ನು ಕಾಯದೆ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ, ಗಣಪತಿ, ಜ್ಯೋತಿ, ನಟರಾಜ್, ನಾರಿ ಲೋಕಪ್ಪ, ವೀಣಾ, ರೇಣುಕಮ್ಮ, ಅರುಣ್ ಗೌಡ, ಚೇತನ, ನಾಗರತ್ನ, ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಮುಲ್ಲಾ ಖಾನ್, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ಪ್ರಮುಖರಾದ ಕಲಸೆ ಚಂದ್ರಪ್ಪ, ಸೋಮಶೇಖರ್ ಲ್ಯಾವಿಗೆರೆ, ಗಜೇಂದ್ರ, ಅಶ್ವಿನ್ ,ಉಮೇಶ್, ಇನ್ನಿತರರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

Leave a Comment