ಸಾಗರ : ತಾಲೂಕಿನ ಆನಂದಪುರದ ಇತಿಹಾಸ ಪ್ರಸಿದ್ಧ ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕವನ್ನು ಜಾತ್ರಾ ಸಮಿತಿ ನಿಗದಿಪಡಿಸಿದೆ.
ಆನಂದಪುರದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಜಾತ್ರಾ ಸಮಿತಿಯು ದಿನಾಂಕವನ್ನು ನಿಗದಿಪಡಿಸಿದೆ.
ಪ್ರತಿ ಮೂರು ವರ್ಷಗಳಿಂದ ನಡೆಯುವ ಇಲ್ಲಿನ ಇತಿಹಾಸ ಪ್ರಸಿದ್ಧ ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಜಾತ್ರೆಯು ಫೆಬ್ರವರಿ 24 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಡಿಸೆಂಬರ್ 23ಕ್ಕೆ ಮರ ಕಡಿಯುವ ಶಾಸ್ತ್ರವನ್ನು ನಡೆಸಲಾಗುವುದು. ಫೆಬ್ರವರಿ 17ಕ್ಕೆ ಅಂಕೆ ಹಾಕಲಾಗುವುದು. ಫೆಬ್ರುವರಿ 24 ರ ಮಂಗಳವಾರ ಜಾತ್ರೆ ಆರಂಭವಾಗಲಿದ್ದು, ಮಾರ್ಚ್ 2 ಸೋಮವಾರ ಮಾರಿಕಾಂಬ ದೇವಿಯ ಜಾತ್ರೆ ಮುಗಿಯಲಿದೆ.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇