ಸಾಗರ : ಶಿವಮೊಗ್ಗದಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಸಂಸದ ಬಿ ವೈ ರಾಘವೇಂದ್ರ ನೀಡಿದ್ದಾರೆ.
ಬಿ.ವೈ ರಾಘವೇಂದ್ರ ಸಂಸದರಾದ ನಂತರ ಶಿವಮೊಗ್ಗ ಅಮೂಲಾಗ್ರ ಬದಲಾವಣೆ ಕಾಣುತ್ತಿದೆ. ವಿಮಾನ ನಿಲ್ದಾಣ, ಸಿಗಂದೂರು ಸೇತುವೆ, ರಾಷ್ಟ್ರೀಯ ಹೆದ್ದಾರಿಗಳು, ನಿರಂತರವಾಗಿ ಓಡಾಡುವ ರೈಲುಗಳು ಅವರ ಶ್ರಮದ ಕೈಕನ್ನಡಿಯಾಗಿವೆ.
ಶಿವಮೊಗ್ಗಕ್ಕೆ ಬರಲಿದೆ ವಂದೇ ಭಾರತ್ ರೈಲು
ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕದಲ್ಲಿ ವಿಶೇಷವಾದ ಸಾಧನೆ ಹಾಗೂ ಕ್ರಾಂತಿಯನ್ನು ಸಂಸದ ಬಿ.ವೈ ರಾಘವೇಂದ್ರ ಮಾಡಿದ್ದಾರೆ.
ಇದರ ಭಾಗವಾಗಿಯೇ 2026 ರೈ ಜನವರಿಯಿಂದ ಶಿವಮೊಗ್ಗದಿಂದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ.
ವಂದೇ ಭಾರತ್ ರೈಲು ಸಂಚಾರದಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಕೇವಲ 3 ಗಂಟೆಯಲ್ಲಿ ತಲುಪಬಹುದು ಎನ್ನಲಾಗಿದೆ.
ಯಾವ ಯಾವ ಊರಿಗೆ ವಂದೇ ಭಾರತ್ ರೈಲು
ಬಹು ನಿರೀಕ್ಷಿತ ವಂದೇ ಭಾರತ್ ರೈಲು ಶಿವಮೊಗ್ಗದಿಂದ ಬೆಂಗಳೂರು, ಕೆರಳಿದ ಎರ್ನಾಕುಲಂ, ಬಿಹಾರದ ಭಗಲ್ ಪುರ್ ಹಾಗೂ ಚಂಡೀಗಢಕ್ಕೆ ಈ ವಿಶೇಷ ರೈಲು ಆರಂಭವಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.