ಶಿವಮೊಗ್ಗ : ಸಿಗಂದೂರು ಸೇತುವೆ ಬಳಿ ಯುದ್ಧ ನೌಕೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಶಿವಮೊಗ್ಗ ನಗರಕ್ಕೆ ಬಂದ ಯುದ್ದ ತರಬೇತಿ ವಿಮಾನವನ್ನು ವೀಕ್ಷಣೆ ಮಾಡಿ, ನಗರದ ಫ್ರೀಡಂ ಪಾರ್ಕ್ ನಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಹೇಳಿದರು.
ಜಿಲ್ಲೆಯ ಯುವಕರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಪ್ರೇರಣೆ ನೀಡುವ ಉದ್ದೇಶದಿಂದ ಈಗಾಗಲೇ ಯುದ್ಧ ಟ್ಯಾಂಕರ್ ತಂದು ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಸ್ಥಾಪಿಸಲಾಗಿದೆ. ಈಗ ಭಾರತೀಯ ವಾಯು ಸೇನೆ ಬಳಸುತ್ತಿದ್ದ HAL HJT-16 KIRAN ವಿಮಾನ ಕೂಡ ಸೋಮವಾರ ನಗರಕ್ಕೆ ಆಗಮಿಸಿದೆ.
ಇದರ ಜೊತೆಗೆ ಸಿಗಂದೂರು ಸೇತುವೆ ಬಳಿಯೂ ಯುದ್ಧ ನೌಕೆಯನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇