ಸಾಗರ : ತಾಲ್ಲೂಕಿನ ಆನಂದಪುರದಲ್ಲಿ 79 ನೇ ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿಗಳಾದ ಆನಂದಪುರ ಆಚಾಪುರ, ಹೊಸೂರು, ಗೌತಮಪುರ, ಯಡೆಹಳ್ಳಿ ಹಾಗೂ ನಾಡಕಚೇರಿ, ಆನಂದಪುರ ಪೊಲೀಸ್ ಸ್ಟೇಷನ್, ಆಟೋ ಸಂಘಗಳು, ಬ್ಯಾಂಕ್ ಹಾಗೂ ಶಾಲಾ ಕಾಲೇಜುಗಳಲ್ಲಿ ಅಬ್ಬರದ ಮಳೆಯಲ್ಲಿಯೂ ಸಂಭ್ರಮದಿಂದ 79ನೇ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಣೆ ಮಾಡಲಾಯಿತು.
ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಡೆದ 79ನೇ ಸ್ವಾತಂತ್ರ್ಯ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಿಎಸ್ಐ ಪ್ರವೀಣ್ ಮಾತನಾಡಿ, ಹಲವು ನಾಯಕರ ಹೋರಾಟ ಹಾಗೂ ಬಲಿದಾನದಿಂದಾಗಿ 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರಕಿದೆ. ಅವರ ಹೋರಾಟದ ಫಲವಾಗಿ ಶುಭ ಗಳಿಗೆಯಲ್ಲಿ ನಾವೆಲ್ಲರೂ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಬಲಿಯಾದ ಸೇನಾನಿಗಳನ್ನು , ನಾಯಕರನ್ನು ಸ್ಮರಿಸಬೇಕು. ಜೊತೆಗೆ ಮುಂದಿನ ಪೀಳಿಗೆಗೂ ನಾಯಕರ ಮಹತ್ವವನ್ನು ಸಾರಬೇಕು. ದೇಶದ ಉನ್ನತಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇