ಸಾಗರ : ತಾಲ್ಲೂಕಿನ ಆನಂದಪುರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ನಡೆಸಿದ ಪ್ರಕರಣದ ಆರೋಪಿಗಳಿಗೆ ಬಿಡುಗಡೆ ದೊರೆತಿದೆ.
2014ರಲ್ಲಿ ಆನಂದಪುರ ಪೊಲೀಸ್ ಹೊರ ಠಾಣೆಯ ಮುಂದೆ N H ರಸ್ತೆಯಲ್ಲಿ ಅಂದಿನ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹೊನ್ನಪ್ಪ ಮತ್ತು ಸಿಬ್ಬಂದಿ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ, ಕಾಂತರಾಜ್ ಎನ್ನುವ ಸುಳುಗೋಡು ಗ್ರಾಮದ ವ್ಯಕ್ತಿ ತಮ್ಮ ಪಿಕಪ್ ವಾಹನದಲ್ಲಿ ಆನಂದಪುರ ಕಡೆಯಿಂದ ತಮ್ಮ ಮನೆಗೆ (ಸುಳುಗೋಡು ) ಹೋಗುತ್ತಿದ್ದರು. ಆದರೆ ಇದನ್ನು ಇನ್ಸ್ಪೆಕ್ಟರ್ ತಪ್ಪು ಗ್ರಹಿಕೆ ಮಾಡಿಕೊಂಡು ತಪ್ಪಿಸಿಕೊಂಡು ಹೋಗುತ್ತಿದ್ದೇನೆ ಎಂದು ಭಾವಿಸಿ, ಕಾಂತರಾಜ್ ಅವರನ್ನು ಮನೆಯಿಂದ ಎಳೆದು ತಂದು ಆನಂದಪುರ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ತಳಿಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಸಂದರ್ಭದಲ್ಲಿ ಸಾರ್ವಜನಿಕ ಪ್ರತಿಭಟನೆಗಳು ನಡೆದವು. ಪ್ರತಿಭಟನಾ ನಿರತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತ್ತು. ಹಲ್ಲೆಗೆ ಒಳಗಾದ ಕಾಂತರಾಜ್ ಅವರು ಸಹ ಇನ್ಸ್ಪೆಕ್ಟರ್ ಸಹಿತ ತಪ್ಪಿಸಸ್ಥ ಪೊಲೀಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಒಟ್ಟು 19 ಜನರ ಪ್ರತಿಭಟನಾ ನಿರತರ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆ ಸಾಗರದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಸುಮಾರು 11 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಟದ ನಂತರ ಇಂದು ಅಂತಿಮವಾಗಿ ಮಾನ್ಯ ಪ್ರಧಾನ ಹಿರಿಯ ವ್ಯವಹಾರ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯ 15 ಆರೋಪಿಗಳ ಬಿಡುಗಡೆ ಮಾಡಿದೆ. ಉಳಿದ 4 ಜನ ಆರೋಪಿಗಳು ಈಗಾಗಲೇ ವಿವಿಧ ಕಾರಣಗಳಿಂದಾಗಿ ಮರಣ ಹೊಂದಿದ್ದಾರೆ.
ನ್ಯಾಯಾಧೀಶರಾದ ನಟರಾಜ್ ಯಾದವ್ ತೀರ್ಪು ನೀಡಿದ್ದು, ಆರೋಪಿಗಳ ಪರವಾಗಿ ವಕೀಲರಾದ ಕೆ ವಿ ಪ್ರವೀಣ್, ಸುರೇಶ್ ಬಾಬು, ಕಿಶೋರ್ ವಾದ ಮಂಡಿಸಿದ್ದರು.