ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಶಿಕ್ಷಣವು ಕೇವಲ ಪುಸ್ತಕ ಪಾಠ ಪರೀಕ್ಷೆ ಫಲಿತಾಂಶ ಪ್ರಮಾಣ ಪತ್ರಕ್ಕೆ ಸೀಮಿತವಾಗಬಾರದು- ಮಹೇಶ್ ಮಾಶಾಲ್. Education is just book lesson test result scale it shouldn’t be limited to that letter.

On: November 20, 2025 12:18 PM
Follow Us:
---Advertisement---

ಸಾಗರ  : ಶಿಕ್ಷಣವು ಕೇವಲ ಪುಸ್ತಕ ಪಾಠ ಪರೀಕ್ಷೆ ಫಲಿತಾಂಶ ಪ್ರಮಾಣ ಪತ್ರಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಧಾರವಾಡದ ಮಹೇಶ್ ಮಾಶಾಲ್  ಕಿವಿ ಮಾತು ಹೇಳಿದರು.

ಅವರು ತಾಲ್ಲೂಕಿನ ಆನಂದಪರ  ಸಮೀಪದ ಮುರುಘಾಮಠದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನ ಹಾಗೂ 597 ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಾಸದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

murugamata 1

ಮನುಷ್ಯರು ಮನುಷ್ಯತ್ವವನ್ನು ಕಳೆದುಕೊಂಡ ಪರಿಣಾಮ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಶಿಕ್ಷಣ ಪಠ್ಯಕ್ಕೆ ಸೀಮಿತವಾಗಿರದೆ ಮನುಷ್ಯನೊಳಗೆ ಹುದುಗಿರುವ ಶಕ್ತಿಯ ಪರಿಚಯವನ್ನು ವಿದ್ಯಾರ್ಥಿಗಳಿಗೆ  ಮಾಡಿಕೊಡುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು ಎಂದು ಹೇಳಿದರು.

ತಲೆಯಲ್ಲಿ ಹುಚ್ಚು ಎದೆಯಲ್ಲಿ ಕಿಚ್ಚು ಇದ್ದರೆ ಮಾತ್ರ ಸರಿಯಾದ ದಾರಿ ಹುಡುಕಿಕೊಂಡು ಜೀವನದಲ್ಲಿ ಉತ್ತಮ ಮಾಡಲು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮನುಷ್ಯ ಕೇವಲ ಪ್ರಾಣಿಗಳಂತೆ ಬದುಕದೆ ತನ್ನೊಳಗಿರುವ ಸಾಮರ್ಥ್ಯವನ್ನು ಹೊರಗಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಮನುಷ್ಯನ ಮೆದುಳಿನಲ್ಲಿ ಗಣಕಯಂತ್ರಕ್ಕಿಂತ ಅಗಾಧವಾದ ಪ್ರಮಾಣದ ಜ್ಞಾನವಿದೆ. ಈ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಕಾರ್ಯ ರೂಪಕ್ಕೆ ತಂದಾಗ ಮಾತ್ರ ಉನ್ನತ ಮಟ್ಟ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಶಿಕ್ಷಣದಲ್ಲಿ ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗುವುದಕ್ಕಿಂತ ಗುಣಮಟ್ಟದ ಸ್ವಶಿಕ್ಷಣದ ಅಗತ್ಯವಿದೆ. ನನ್ನಲ್ಲಿ ಅಗಾಧ ಪ್ರಮಾಣವಾದ ಶಕ್ತಿ ಇದೆ ಎಂದು ಸ್ವಶಿಕ್ಷಣದ ಅರಿವು ಹೆಚ್ಚಾದಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನೆಯಲ್ಲಿ ವಿದ್ಯಾರ್ಥಿಗಳು ಯುವಕರು ವಾದಕ್ಕೆ ಬಿಳದೆ ಸಂವಾದದಲ್ಲಿ ತೊಡಗಿಕೊಳ್ಳಬೇಕು. ಇದರಿಂದಾಗಿ ಹಲವು ವಿಷಯಗಳು ಖರ್ಚಿತವಾಗಿ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.

ಅವರಾದಿ ಫಲಹಾರೇಶ್ವರ ಸಂಸ್ಥಾನ ಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಬದುಕಲು ಕರ್ಮ ಮಾಡಬೇಕು, ಕರ್ಮವನ್ನ ಜೀವನದ ಉರುಗೋಲಾಗಿ ಪರಿವರ್ತಿಸಿಕೊಂಡಾಗ ಜೀವನ ಸಂತಸವಾಗಿರುತ್ತದೆ. ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಮೆಲುಕು ಹಾಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

murugamata 2

ಆನಂದಪುರದ ಪಿಎಸ್ಐ ಪ್ರವೀಣ್  ಮಾತನಾಡಿ, ಸಮಾಜದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು ಮೊಬೈಲ್ ಬಳಕೆದಾರರು ಬಹಳ ಜಾಗೃತೆಯಿಂದ ಬಳಿಕ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ತಂತ್ರಜ್ಞಾನ ಬದಲಾದಂತೆ ಸೈಬರ್ ಕ್ರೈಂ ನವರು ಸಹ ಹೊಸ ತಂತ್ರಜ್ಞಾನ ಬಳಸಿಕೊಂಡು ಹ್ಯಾಕ್ ಮಾಡುತ್ತಿದ್ದಾರೆ. ಓಟಿಪಿ ಎಪಿಕೆ ಪೈಲ್ ಮೂಲಕ ಹ್ಯಾಕ್ ಮಾಡುತ್ತಿದ್ದ ಅವರು, ಈಗ ಕರೆಗಳ ಮೂಲಕ ನಮ್ಮ ಡಾಟವನ್ನು ಕದಿಯುತ್ತಿದ್ದಾರೆ. ಆದ್ದರಿಂದ ಅಪರಿಚಿತ ಕರೆಗಳು ಬಂದಾಗ 20 ಸೆಕೆಂಡುಗಳಿಗಿಂತ ಹೆಚ್ಚು ಮಾತನಾಡದೆ ಕರೆಯನ್ನು ಬಂದ್ ಮಾಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಷಟ್ ಸ್ಥಲ ಧ್ವಜಾರೋಹಣವನ್ನು ಚೌಕಿ ಮಠದ ನೀಲಕಂಠ ಸ್ವಾಮೀಜಿ ನೆರವೇರಿಸಿದರು. ರಾಮದುರ್ಗದ ಶಾಂತವೀರ ಸ್ವಾಮೀಜಿ , ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಹೊದಲೂರು ವೃಷಭೇಂದ್ರ ಸ್ವಾಮೀಜಿ, ಭದ್ರಾವತಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ,  ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ಕುಲ ಸಚಿವರಾದ ಕೆ‌. ಸಿ.ಶಶಿಧರ್, ದೀಪೋತ್ಸವ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್, ಪ್ರಮುಖರಾದ ರುದ್ರಮುನಿ ಎನ್ ಸಜ್ಜನ್, ಎಚ್ ಎನ್ ಮಹಾರುದ್ರ, ಉಮೇಶ್ ಮಸರೂರು, ಅನಿಲ್ ಬರದವಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now

Leave a Comment