ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧನ ಮಾಡಿದ ಪೊಲೀಸರು. Police have arrested the suspects in the fatal attack.

On: January 11, 2026 2:41 PM
Follow Us:
---Advertisement---

ಸಾಗರ : ತಾಲೂಕಿನ ಆನಂದಪುರ ಸಮೀಪದ  ಮಸಕಲ್ ಬೈಲು ಬಸ್ ನಿಲ್ದಾಣದಿಂದ ಜನವರಿ 5 ರಂದು  ಮಾವ ಮತ್ತು ಸೊಸೆ ಬರುವಾಗ ಮಾರಣಾಂತಿಕ ಅಲೆ ನಡೆಸಿದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ

ಜನವರಿ 5ರಂದು ಸಂಜೆ 7 ರ ಸಮಯದಲ್ಲಿ ತಮ್ಮ ಸೊಸೆ ಶ್ರುತಿ ಅವರನ್ನು ಮಸ್ಕಲ್ ಬೈಲು ಬಸ್ ನಿಲ್ದಾಣದಿಂದ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಮನೆಗೆ ಬರುತ್ತಿದ್ದ ಸಮಯದಲ್ಲಿ ಬೈಕನ್ನು ಅಡ್ಡ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಅವರ ಮುಖಕ್ಕೆ ಖಾರದಪುಡಿ ಎರಚಿ, ಬೈಕಿನ ಹಿಂಬದಿಯಲ್ಲಿ ಇದ್ದ ಶ್ರುತಿ  ಅವರಿಗೆ ಸ್ಟೀಲ್ ರಾಡಿ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಈ ವಿಷಯವಾಗಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಕಾರ್ಯನಿರತರಾದ ಪೊಲೀಸರು, ಪೊಲೀಸ್ ಅಧೀಕ್ಷಕರಾದ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ, ಸಾಗರದ ಸಾಗರದ ಉಪ ವಿಭಾಗ ಪೊಲೀಸ್ ಉಪಾಧ್ಯಕ್ಷಕರಾದ ಕೇಶವ್ ಕೆ.ಇ,  ಸಾಗರ ಗ್ರಾಮಂತರ ವೃತ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆನಂದಪುರ ಪೊಲೀಸ್ ಠಾಣಾ ಪಿಎಸ್ಐ ಪ್ರವೀಣ್ , ಸಿಡಿ ಆರ್ ಸೆಲ್ ಶಿವಮೊಗ್ಗ ಸಿಬ್ಬಂದಿಯಾದ ಇಂದ್ರೇಶ್, ಗುರು, ಎ.ಎಸ್.ಐ ಸಿದ್ದರೂಡ, ಸಿಬ್ಬಂದಿಗಳಾದ ಪ್ರಶಾಂತ್, ಪರಶುರಾಮ್, ತಾಹಿರ್, ಉಮೇಶ್ ಲಮಾಣಿ, ಹರ್ಷ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಗೆ ಯತ್ನಿಸಿದ ಆರೋಪಿಗಳಾದ ಸೊರಬದ ಗೋವಿಂದ ವೈ, ಕೊಲೆಗೆ ಕುಮಕ್ಕು  ನೀಡಿದ ಕಿರಣ್ ಕುಮಾರ್ ಅವರನ್ನ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ ಸಿಬ್ಬಂದಿ ವರ್ಗದವರಿಗೆ ಪೊಲೀಸ್ ಅಧಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment