ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಆಟೋ ಕಳ್ಳತನ – ಆಟೋ ಸಮೇತ ಕಳ್ಳನನ್ನು ಬಂಧನ ಮಾಡಿದ ಪೊಲೀಸರು. Auto theft – police arrest thief with auto

On: November 17, 2025 4:44 PM
Follow Us:
---Advertisement---

ಸಾಗರ : ತಾಲ್ಲೂಕಿನ ಆನಂದಪುರ ಸಮೀಪದ ಆಚಾಪುರ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿಲ್ಲಿಸಿದ್ದ ಲಗೇಜ್ ಆಟೋ ಕಳ್ಳತನವಾಗಿತ್ತು. ಕಳ್ಳತನವಾಗಿದ್ದ ಆಟೋವನ್ನು ಪತ್ತೆ ಹಚ್ಚುವಲ್ಲಿ ಆನಂದಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಶೇಕ್ ಮಿರಾನ್  ಅವರು ತಮ್ಮ ಲಗೇಜ್ ಆಟೋವನ್ನು 12/11 ರಂದು ಆಚಾಪುರ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿಲ್ಲಿಸಿದ್ದರು. 13/11 ರಂದು ಆ ಸ್ಥಳಕ್ಕೆ ಬಂದು ನೋಡಿದಾಗ ಆಟೋ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ವಿಷಯವಾಗಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳ್ಳತನ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು, ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್,   ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ, ರಮೇಶ್ ಹಾಗೂ ಸಾಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಕೇಶವ್ ಕೆ‌.ಇ, ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ಟಿ.ಎಸ್.ಐ ಪ್ರವೀಣ್ ಹಾಗೂ ಸಿಬ್ಬಂದಿಗಳಾದ ಇಂದ್ರೇಶ್, ಪ್ರಶಾಂತ್, ಪರಶುರಾಮ್, ಉಮೇಶ್ ಲಮಾಣಿ, ಸಂತೋಷ್, ಸುನಿಲ್ ಅವರನ್ನು ಒಳಗೊಂಡ ತಂಡ 16/11 ರಂದು ಆಟೋ ಕಳ್ಳತನ ಮಾಡಿದ್ದ ಹೊಳೆಹೊನ್ನೂರು ಜಾವಳ್ಳಿ ಗ್ರಾಮದ ಅಶೋಕ್ (22) ಆರೋಪಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ‌‌. ಜೊತೆಗೆ ಕಳ್ಳತನ ಮಾಡಿದ ಆಟೋವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಮಾನ್ಯ ಪೊಲೀಸ್ ಅರಿಕ್ಷಕರು ಪ್ರಶಂಸಿ ವ್ಯಕ್ತಪಡಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment