ಸಾಗರ : ತಾಲ್ಲೂಕಿನ ಆನಂದಪುರ ಸಮೀಪ ದಾಸಕೊಪ್ಪದಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದಾಗಿ ವೃದ್ಧೆ ರಂಗವ್ವ ಮನೆ ಮಳೆಯಿಂದ ಸಂಪೂರ್ಣ ಹಾನಿಗಿಡಾಗಿತ್ತು. ಈ ಹಿಂದೆ ಪರಿಶೀಲಿಸಿದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಸಂಪೂರ್ಣ ದುರಸ್ತಿ ಮಾಡಿಸಿ ಕೊಡುವ ಭರವಸೆ ನೀಡಿದ್ದರು.
ಶಾಸಕರು ನೀಡಿದ ಭರವಸೆಯಂತೆಯೇ , ಶಾಸಕರ ಸೂಚನೆ ಮೇರೆಗೆ ಸ್ಥಳೀಯ ಕಾರ್ಯಕರ್ತರು ಮುಂದೆ ನಿಂತು ವೃದ್ಧೆಯ ಮನೆಯನ್ನು ದುರಸ್ತಿಗೊಳಿಸಿದ್ದಾರೆ. ಮನೆಯ ಮೇಲ್ಚಾವಣಿ, ಬಾಗಿಲು ಹಾಗೂ ನೆಲವನ್ನು ಸರಿಪಡಿಸಿ ಕೊಟ್ಟಿದ್ದಾರೆ.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಪರಿಶೀಲನೆ ನಡೆಸಿ, ಇನ್ನು ಮುಂದೆ ಹೊಸ ಮನೆಯಲ್ಲಿ ವಾಸ ಮಾಡುವಂತೆ ಸೂಚನೆ ನೀಡಿದರು. ಮಳೆಗಾಲ ಮುಗಿದ ಮೇಲೆ ಗೋಡೆಯ ಗಾರೆ ಕೆಲಸ ಹಾಗೂ ಇನ್ನುಳಿದ ಕೆಲಸಗಳನ್ನು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಾರ್ವಜನಿಕರು ಸಹಾಯ ಮಾಡಿದರೆ ಅವರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಾರ್ಯೋನ್ಮುಖರಾಗಬೇಕು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ, ಪ್ರಮುಖರಾದ ಗಣಪತಿ ಮಂಡಗಳಲೆ, ಉಮೇಶ್, ರಮಾನಂದ ,ಸಿರಿಜಾನ್, ಅಶ್ವಿನ್, ರಹಮತ್ ವುಲ್ಲಾ, ಮಂಜುನಾಥ್ ಇದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇