ಸಾಗರ : ಮಲೆನಾಡಿನಲ್ಲಿ ಹಲವು ಕಡೆ ಜನಸಂಪರ್ಕಕ್ಕೆ ಕಾಲು ಸಂಕಗಳೇ ಆಸರೆಯಾಗಿವೆ. ಹಲವೆಡೆ ಕಾಲು ಸಂಕಗಳೆ ಇಲ್ಲ. ಕೆಲವೆಡೆ ಇದ್ದರೂ ಹಾಳಾಗಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಮಳೆಗಾಲದಲ್ಲಿ ಹಳ್ಳ ಕೊಳ್ಳಗಳನ್ನು ದಾಟುವಾಗ ಮರದ ದಿಮ್ಮಿಗಳ ಸಾರ ಹಾಕಿಕೊಂಡು ಓಡಾಡುವ ಗ್ರಾಮಸ್ಥರ ಪಾಡು ಹೇಳತೀರದು. ಹಾಳಾದ ಕಾಲು ಸಂಕಗಳ ಮೇಲೆ ದಾಟುವಾಗ ಜನರು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳಬೇಕಾಗಿದೆ.
ಪ್ರತಿ ವರ್ಷ ಮಳೆಗಾಲ ಬಂದಾಗ ಅಧಿಕಾರಿಗಳು ಜನಪ್ರತಿನಿಧಿಗಳು ಕಾಲು ಸಂಕ ಮಿನಿ ಸೇತುವೆ ಮಾಡಿಕೊಡುತ್ತೇವೆ ಎಂದು ಆಶ್ವಾಸ ನೀಡುತ್ತಾ ಬಂದಿದ್ದಾರೆ. ಆದರೆ ಸರಿಯಾಗಿ ಇಲ್ಲಿಯವರೆಗೆ ಕಾರ್ಯನ್ಮುಖವಾಗಿ ಜಾರಿಯಾಗಿಲ್ಲ.
ಕಾಲು ಸಂಕ ಸಮಸ್ಯೆ ನೀಗಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ಬಹು ದಿನಗಳಿಂದ ಬೇಡಿಕೆಯಿದ್ದ ಕಾಲು ಸಂಕ ಸಮಸ್ಯೆಯನ್ನು ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ನೀಗಿಸಿದ್ದಾರೆ. ಶಾಸಕರು ಸಾಗರ ಹೊಸನಗರದ ಫಲಾನುಭವಿಗಳಿಗೆ ಈ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಮಂಜೂರಾದ ಸ್ಥಳಗಳ ಪರಿಶೀಲನೆಯನ್ನು ಸಹ ಅಧಿಕಾರಿಗಳು ನಡೆಸುತ್ತಿದ್ದಾರೆ.
ಸಾಗರ ಹೊಸನಗರ ಕ್ಷೇತ್ರಕ್ಕೆ 240 ಕಾಲುಸಂಕಗಳು
ಸಾಗರ ಹೊಸನಗರ ಕ್ಷೇತ್ರಕ್ಕೆ ಸುಮಾರು 240 ಕಾಲು ಸಂಕಗಳು ಮಂಜುರಾಗಿವೆ. ಸಾಗರ ತಾಲೂಕಿನ ಯಡೆಹಳ್ಳಿ, ಆನಂದಪುರ, ಹೊಸೂರು, ಅರಲಗೋಡು, ಆಚಾಪುರ, ಎಸ್ ಎಸ್ ಭೋಗ್, ಪಡವಗೋಡು, ಹೆಗ್ಗೋಡು, ಬರೂರು, ಕುದರೂರು, ಚೆನ್ನಗೊಂಡ, ಗೌತಮಪುರ, ಭಾನುಕುಳಿ, ಕಲ್ಮನೆ, ಆವಿನಹಳ್ಳಿ, ಕೋಳೂರು, ತುಮರಿ, ಮಾಲ್ವೆ, ಕೆಳದಿ, ಯಡಜಿಗಳೆಮನೆ, ಉಳ್ಳೂರು, ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆ ಕಾಲುಸಂಕ ಮಂಜೂರಾಗಿದೆ.
ಹೊಸನಗರ ತಾಲ್ಲೂಕಿನ ನಿಟ್ಟೂರು, ಕೋಡೂರು, ಕೆಂಚನಾಲ, ಬೆಳ್ಳೂರು, ಬಾಳೂರು, ಮುಂಬಾರು, ಮಾರುತಿಪುರ, ಚಿಕ್ಕಜೆನಿ, ಅರಸಾಳು, ಗುಡ್ಡೆ ಕೊಪ್ಪ ಸೇರಿದಂತೆ ಇನ್ನೂ ಹಲವು ಗ್ರಾಮ ಪಂಚಾಯಿತಿಗಳ ಹಲವು ಗ್ರಾಮಗಳಿಗೆ ಮಂಜೂರಾಗಿದೆ
50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಲು ಸಂಕಗಳು
ಸುಮಾರು 50 ಕೋಟಿ ವೆಚ್ಚದಲ್ಲಿ 240 ಕಾಲು ಸಂಖ್ಯೆಗಳು ನಿರ್ಮಾಣವಾಗುತ್ತಿದೆ. ಇನ್ನಾದರೂ ಬಹು ದಿನಗಳ ಬೇಡಿಕೆಯಾದ ಆದ ಕಾಲು ಸಂಕಗಳು ಆದಷ್ಟು ಬೇಗ ನಿರ್ಮಾಣವಾಗಿ ಜನರ ಸಮಸ್ಯೆ ನಿಗಲಿ ಎಂಬುದು ಆಶಯವಾಗಿದೆ.