ಸಾಗರ : ಪುಷ್ಯಾ ಮಳೆಯ ಅಬ್ಬರದಿಂದಾಗಿ ದನದ ಕೊಟ್ಟಿಗೆ ಸಂಪೂರ್ಣ ಕುಸಿತ ಬಿದ್ದ ಘಟನೆ ಸಾಗರ ತಾಲೂಕಿನ ಮುರುಘಾಮಠದಲ್ಲಿ ನಡೆದಿದೆ.
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಗುರುವಾರ ತಡರಾತ್ರಿ ಮುರುಘಾಮಠದ ಶೇಖರ್ ಪೂಜಾರಿ ಅವರ ದನದ ಕೊಟ್ಟಿಗೆ ಸಂಪೂರ್ಣ ಕುಸಿದು ಬಿದ್ದಿದೆ.
ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಮೇಲ್ಚಾವಣಿ ಸಂಪೂರ್ಣ ಹಾಳಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸುಮಾರು 12 ದನಗಳಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ.
ದನದ ಕೊಟ್ಟಿಗೆ ನಿರ್ಮಿಸಿ ಕೊಡುವಂತೆ ಶೇಖರ್ ಪೂಜಾರಿ ಮನವಿ
ಮಳೆಯಿಂದ ದನದ ಕೊಟ್ಟಿಗೆ ಸಂಪೂರ್ಣ ಕುಸಿದು ಬಿದ್ದ ಕಾರಣ ಲಕ್ಷಾಂತರ ನಷ್ಟ ಉಂಟಾಗಿದೆ. ಸರ್ಕಾರ ಈ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಕೊಟ್ಟಿಗೆ ನಿರ್ಮಾಣ- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ
ದನದ ಕೊಟ್ಟಿಗೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿ ಕೊಡಲಾಗುವುದು ಎಂದು ಆಚಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ಮಳೆಯಿಂದ ಅನಾಹುತ ಸಂಭವಿಸಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ
ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿತ್ತಿರುವುದರಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸುವುದು ಸಹಜವಾಗಿದೆ. ಇಂಥ ಸಂದರ್ಭದಲ್ಲಿ ಯಾವುದೇ ರೀತಿಯ ಹಾನಿ ಉಂಟಾದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮನವಿ ಮಾಡಿದ್ದಾರೆ.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ ,,👇👇