ಸಾಗರ : ತಾಲ್ಲೂಕಿನ ತ್ಯಾಗರ್ತಿಯ ವಿವೇಕಾನಂದ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಿದ್ದ ಬಾಲ್ಯ ವಿವಾಹ ತಡೆ, ಪೋಸ್ಕೋ ಕಾಯ್ದೆ ಮತ್ತು ಕಾನೂನು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಆನಂದಪುರದ ಪಿಎಸ್ಐ ಪ್ರವೀಣ್ ಎಸ್.ಪಿ ನೀಡಿದರು.
ವಿದ್ಯಾರ್ಥಿಗಳು ಯಾವುದೇ ಹೊರಗಿನ ಆಕರ್ಷಣೆಗೆ ಒಳಗಾಗದೇ 18 ವರ್ಷ ತುಂಬುವ ವರೆಗೆ ಆಟ ಪಾಠ ಊಟದ ಕಡೆ ಹೆಚ್ಚಿನ ಗಮನಹರಿಸಬೇಕು ಹೇಳಿದರು.
ಮಕ್ಕಳು ಶಾಲೆಗೆ ಬರುವಾಗ ಮತ್ತು ಮನೆಗೆ ತೆರಳುವಾಗ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಮಕ್ಕಳಿಗೆ ಯಾವುದೇ ವ್ಯಕ್ತಿ ಗಳಿಂದ ಶೋಷಣೆ ತೊಂದರೆ ಆದರೆ ತಕ್ಷಣ ಪೋಷಕರು ಅಥವಾ ಶಿಕ್ಷಕರ ಗಮನಕ್ಕೆ ತರಬೇಕು.ಲೈಸನ್ಸ್ ಇಲ್ಲದೆ ವಾಹನ ಚಲಾವಣೆ ಮಾಡುವುದು ಅಪರಾಧ ವಾಗುತ್ತದೆ. ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದರೆ ಪೋಷಕರು ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳು ಅಪರಾಧಗಳಿಂದ ದೂರ ಇರಬೇಕು ಪೋಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾದರೆ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ತೊಂದರೆ ಆಗುತ್ತದೆ ಎಂದು ಸಲಹೆ ನೀಡಿದರು.
ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರ ಇರಬೇಕು. ಮೊಬೈಲ್ ಬಳಕೆ ಅನಿವಾರ್ಯತೆ ಇದ್ದಾಗ ಜಾಗ್ರತೆ ವಹಿಸಬೇಕು. ಇತ್ತೀಚೆಗೆ ಸೈಬರ್ ಕ್ರೈಂ ಜಾಸ್ತಿ ಆಗಿದ್ದು, ಇದರಲ್ಲಿ ಹಣ ಕಳೆದುಕೊಂಡರೆ ಮರಳಿ ಸಿಗುವುದಿಲ್ಲ ಇದರ ಬಗ್ಗೆ ಮಕ್ಕಳಿಗೆ ಅರಿವು ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕ ಎಲ್. ಆರ್ ವೀರಪ್ಪ, ಮುಖ್ಯ ಶಿಕ್ಷಕ ತುಳಜ ನಾಯ್ಕ, ಶಿಕ್ಷಕ ಕಮಲಾಪತಿ ಇದ್ದರು.