ಸಾಗರ : ತಾಲ್ಲೂಕಿನ ಆನಂದಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿ ಗಾಂಜಾ ಸೇವನೆ ಮಾಡಿದ ಮೂವರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.
ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪ್ರಶಾಂತ್, ಉಮೇಶ್ ಹಾಗೂ ನಿರಂಜನ್ ಅವರು ಠಾಣಾ ವ್ಯಾಪ್ತಿಯ ಗೌತಮಪುರ, ಹೊಸಕೊಪ್ಪ, ಮಲಂದೂರು, ದಾಸಕೊಪ್ಪ ಮೊದಲಾದ ಕಡೆ ಗಸ್ತು ತಿರುಗುತ್ತಿದ್ದ ಸಮಯದಲ್ಲಿ, ದಾಸಕೊಪ್ಪ ಕೆರೆ ಹತ್ತಿರ ಮೂರು ಜನ ಮಾದಕ ವಸ್ತುಗಳನ್ನು ಸೇವಿಸಿ ಅನುಚಿತವಾಗಿ ವರ್ತಿಸುವುದನ್ನು ಕಂಡು, ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತುಗಳು ಸೇವನೆ ಮಾಡಿರುವುದು ಕಂಡುಬಂದಿದೆ.
ಆನಂದಪುರ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ಅವರ ಸೂಚನೆ ಮೇರೆಗೆ ಮಾದಕ ವಸ್ತು ಸೇವಿಸಿದ್ದ ಮೂವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಕಂಡುಬಂದಿದೆ.
ಗಾಂಜಾ ಸೇವನೆ ಮಾಡಿದ ವ್ಯಕ್ತಿಗಳು ಆನಂದಪುರ ಹಾಗೂ ಸುತ್ತಮುತ್ತಲಿನ ವ್ಯಕ್ತಿಗಳಿಂದ ತಿಳಿದುಬಂದಿದ್ದು, ಅವರ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.





