ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕಾಗೋಡು ತಿಮ್ಮಪ್ಪ ಸನ್ಮಾನ ಕಾರ್ಯಕ್ರಮದಲ್ಲಿ ಹಣ ಲೂಟಿ ಮಾಡಿದ ಕಾಂಗ್ರೆಸ್ ಮುಖಂಡ – ರತ್ನಾಕರ್ ಹೊನಗೋಡು Congress leader who looted money at kagodu thimmappa felicitation program

On: September 27, 2025 9:04 AM
Follow Us:
---Advertisement---

ಸಾಗರ : ತಾಲೂಕಿನ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಬೇಕಾಗಿರುವುದು ಶಾಸಕರ ಕರ್ತವ್ಯವಾಗಿದೆ. ಹಾಗೆಯೇ ಕ್ಷೇತ್ರದ ಮತದಾರನಾಗಿ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಕೇಳುವ ಹಕ್ಕು ಸಹ ನಮಗೆ ಇದೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ  ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು  ವಾಗ್ದಾಳಿ ನಡೆಸಿದರು.

ಅವರು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸರ್ಕಾರಿ ಜಾಗದಲ್ಲಿ ಹತ್ತಾರು ಎಕರೆ ಜಾಗದಲ್ಲಿ ಕಲ್ಲು ಕೋರೆ ಮಾಡಿ ಹಾಗೂ ಹೊಸನಗರದಲ್ಲಿ ಮಣ್ಣು ಮಿಶ್ರಿತ ಮರಳು ಮಾರಾಟ ಮಾಡಿ, ಜನ ಅಲ್ಲಿಂದ ನಿಮ್ಮನ್ನು ಓಡಿಸಿರುವುದು ನಾವು ಮರೆತಿಲ್ಲ ಎಂದು ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಗೋಡು ತಿಮ್ಮಪ್ಪ ಸನ್ಮಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 25 ರಿಂದ 50 ಲಕ್ಷ ಹಣ ವಸೂಲಿ ಮಾಡಿ ಕಾರ್ಯಕ್ರಮಕ್ಕೆ ಕೇವಲ ಎರಡರಿಂದ ಮೂರು ಲಕ್ಷ ಖರ್ಚು ಮಾಡಿದ ಕಳ್ಳ ಎಂದು ಟೀಕಿಸಿದರು.

ಭೀಮನೇರಿ ಕೊರಲಿಕೊಪ್ಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಕೆಲಸ ಮಾಡಿದ್ದಾರೆ. ಇದಲ್ಲದೆ ಹುತ್ತಾದಿಂಬಾದಲ್ಲೂ ಸಹ ಜಮೀನು ಕಬಳಿಸಲು ಹೊರಟಾಗ ರೈತರು ಅಲ್ಲಿಂದ ಓಡಿಸಿದ್ದಾರೆ. ಇಂಥವರು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಖರೀದಿಸುವ ಶುಂಠಿಗೆ ಹಣ ನೀಡಿಲ್ಲ ಎಂದು ಆರೋಪ ಮಾಡುವ ನೀವು ದೇವಸ್ಥಾನಕ್ಕೆ ಬಂದು ಸಾಬೀತುಪಡಿಸಬೇಕು. ಗಣಪತಿ ದೇವಸ್ಥಾನ ಸಿಗಂದೂರು ದೇವಸ್ಥಾನ ಇಲ್ಲವೇ ಧರ್ಮಸ್ಥಳ ದೇವಸ್ಥಾನದಲ್ಲಿ ಬಂದು ಸಾಬೀತುಪಡಿಸಿದರೆ ಅಲ್ಲಿಯೇ ಹಣ ನೀಡುತ್ತೇನೆಂದು ಸವಾಲು ಎಸೆದರು.

ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಮುಕಾಂಬು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭರ್ಮಪ್ಪ, ಪ್ರಮುಖರಾದ ಬೂದ್ಯಪ್ಪ , ಗಣಪತಿ, ದೇವರಾಜ್, ರೇವಪ್ಪ ಹೊಸಕೊಪ್ಪ, ಗಂಗಾಧರ, ಧನರಾಜ್, ಚಂದ್ರು, ಗುರು ಮದ್ಲೆಸರ, ಹಿರೆಯಣ್ಯಪ್ಪ , ರವಿ, ಪ್ರಕಾಶ್, ಷಣ್ಮುಖ, ನಾಗರಾಜ್, ಶಿವು ಇದ್ದರು.

ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇👇👇👇

 

Join WhatsApp

Join Now

Join Telegram

Join Now

Leave a Comment