ಸಾಗರ : ತಾಲೂಕಿನ ತ್ಯಾಗರ್ತಿ ಗ್ರಾಮದ ಮಾರಿಕಾಂಬಾ ಸರ್ಕಲ್ ಅಕ್ರಮ ದನಸಾಗಾಟ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ತಡರಾತ್ರಿ ಅಕ್ರಮವಾಗಿ ದನಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ತ್ಯಾಗರ್ತಿ ಗ್ರಾಮಸ್ಥರು ಮಾರಿಕಾಂಬಾ ಸರ್ಕಲ್ ನಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಸಾಗಾಟ ಬಯಲಿಗೆ ಬಂದಿದೆ. ದನ ಸಾಗಾಟಕ್ಕೆ ಬಳಸಿದ ವಾಹನ
ವಾಹನದಲ್ಲಿ ಎರಡು ಕೋಣ ಹಾಗೂ 4 ಹೋರಿಗಳನ್ನು ಹಿಂಸಾತ್ಮಕವಾಗಿ ಪರವಾನಿಗೆ ಇಲ್ಲದೆ ಸಾಗಾಟ ಮಾಡುವುದು ಕಂಡುಬಂದಿದೆ. ಈ ಜಾನುವಾರುಗಳನ್ನು ಅಡ್ಡೇರಿ ಗ್ರಾಮದ ನಾಗರಾಜಪ್ಪ ಎಂಬುವವರಿಂದ 38,000ಗಳನ್ನು ಕೊಟ್ಟು ಖರೀದಿಸಿದ್ದು, ಇವುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಗಿಣಿವಾಲ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸೊರಬ ತಾಲ್ಲೂಕಿನ ಇಬ್ಬರನ್ನು ಬಂಧನ ಮಾಡಿದ್ದು, ಆನಂದಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಶಪಡಿಸಿಕೊಂಡ ಹಸುಗಳನ್ನು ಮುರುಘಾಮಠದ ಗೋಶಾಲೆಗಳಿಗೆ ಬಿಡಲಾಗಿದೆ.
ಪೋಲಿಸ್ ಸಿಬ್ಬಂದಿಗಳಾದ ಸಿಪಿಸಿ ನಿರಂಜನ್ ಹಾಗೂ ಚಾಲಕರಾದ ಎಪಿಸಿ ಪ್ರದೀಪ್ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, 112 ಗೆ ಕರೆ ಬಂದ ಹಿನ್ನೆಲೆಯಲ್ಲಿ, ತಡರಾತ್ರಿ ಸ್ಥಳಕ್ಕೆ ಹೋಗಿ ವಾಹನವನ್ನು ವಶಪಡಿಸಿಕೊಂಡು ದೂರು ದಾಖಲಿಸಿರುತ್ತಾರೆ.