ಸಾಗರ : ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು ನನ್ನ ಕಡೆ ಮನೆ ಹಾನಿ ಬೆಳೆ ಹಾನಿ ಆಗುತ್ತಿರುವುದು ಕಂಡುಬರುತ್ತಿದೆ.
ನಿರಂತರವಾಗಿ ಸುರಿದರು ಮಳೆಯಿಂದಾಗಿ ತಾಲೂಕಿನ ಆನಂದಪುರ ಸಮೀಪ ದಾಸಕೊಪ್ಪ ಗ್ರಾಮದಲ್ಲಿ ರಂಗಮ್ಮ ಮನೆ ಮೇಲ್ಚಾವಣಿ ಸಂಪೂರ್ಣ ಬಿದ್ದಿದೆ.
ವಿಷಯ ತಿಳಿದ ಶಾಸಕರು ಸ್ಥಳ ಪರಿಶೀಲನೆಗೆ ರಂಗಮ್ಮ ಅವರ ಮನೆಗೆ ಹೋದಾಗ ಶಾಸಕರ ಕಂಡೊಡನೆ ರಂಗಮ್ಮ ಅಳಲು ಆರಂಭಿಸಿದರು.
ಸಂಪೂರ್ಣ ಸಹಾಯದ ಭರವಸೆ ನೀಡಿದ ಶಾಸಕರು
ಮನೆ ಕಳೆದುಕೊಂಡ ಮಹಿಳೆ ಶಾಸಕರನ್ನು ಕಂಡ ತಕ್ಷಣ ಅಳಲಾರಂಭಿಸಿದರು. ಆಗ ಶಾಸಕರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮನೆಯನ್ನು ಸಂಪೂರ್ಣ ರೆಡಿ ಮಾಡಿಕೊಡುವುದಾಗಿ ತಿಳಿಸಿದರು. ಅಲ್ಲದೆ ಸ್ಥಳದಲ್ಲೇ ಅಳುತ್ತಿದ್ದ ವೃದ್ಧೆಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಧನ ಸಹಾಯ ಮಾಡಿದರು. ಅಲ್ಲದೆ ಸ್ಥಳದಿಂದ ಮುಖಂಡರಿಗೆ ದಿನಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಸೂಚನೆ ನೀಡಿದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇