ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕೇಂದ್ರ ಸರ್ಕಾರದ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗುತ್ತದೆ ವಿನಃ ರಾಜ್ಯ ಸರ್ಕಾರದ ಅನುದಾನದಿಂದಲ್ಲ

On: July 3, 2025 5:39 PM
Follow Us:
---Advertisement---

ಸಾಗರ : ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ಅನುದಾನದಿಂದ ನಿರ್ಮಾಣವಾಗುತ್ತದೆ ವಿನಹಃ ರಾಜ್ಯ ಸರ್ಕಾರದ ಅನುದಾನದಿಂದಲ್ಲ ಎಂಬುವುದನ್ನು ಶಾಸಕರಾದ ಗೋಪಾಲಕೃಷ್ಣ ಬೇಳೂರು ಅರ್ಥಮಾಡಿಕೊಳ್ಳಬೇಕು  ಎಂದು ಎಂ.ಸಿ.ಎ ಮಾಜಿ ನಿರ್ದೇಶಕ ಹಾಗೂ ಬಿಜೆಪಿ ಯುವ ಮುಖಂಡ ಎಚ್.ಆರ್ ತೀರ್ಥೇಶ್ ಹೇಳಿದರು.20250703 183654

ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಗೊಳಿಸಿದ ತನ್ನ ಅನುದಾನವನ್ನೇ ಸಮರ್ಥವಾಗಿ ಬಳಸಿಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸುತ್ತಿರುವ ಸಂಸದ ಬಿ ವೈ ರಾಘವೇಂದ್ರ ಅವರ ಬಗ್ಗೆ  ಶಾಸಕರು  ಪದೇ ಪದೇ ಕೇಂದ್ರ ಸರ್ಕಾರದ ಅನುದಾನವನ್ನ ಹೈಜಕ್ ಮಾಡಿಕೊಳ್ಳುವ ಬರದಲ್ಲಿ ಸಂಸದರ ಬಗ್ಗೆ ವಿನಾಕಾರಣ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಲ್ಲಿ ಸಂಸದರು ಮೂಗು ತೂರಿಸಬಾರದು ಎಂದು ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.20250703 192035   

 ಸಂಸದರು ತಾವು ತಂದ ಅನುದಾನ ಕಾಮಗಾರಿಗಳನ್ನು ಸಂಪೂರ್ಣ ಮುಗಿಯುವವರೆಗೂ ಸ್ಥಳ ಪರಿಶೀಲನೆ ಮಾಡಿ, ಅಧಿಕಾರಿಗಳಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಾಕಿತು ಮಾಡುತ್ತಾ.. ಕಾಮಗಾರಿಯ ಬಗ್ಗೆ ವಿಶೇಷ ಕಾಳಜಿ, ಆಸಕ್ತಿಯಿಂದ ನಮ್ಮನ್ನು ಗೆಲ್ಲಿಸಿದ ಕ್ಷೇತ್ರಕ್ಕೆ ಜನಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ  ಹಾಗೂ ತಮ್ಮ ಕರ್ತವ್ಯ  ಎಂದು ಭಾವಿಸಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.  ಇದಕ್ಕೆ ಮೂಗು ತೂರಿಸುವ ಕೆಲಸ ಎನ್ನುವುದಿಲ್ಲ ಎಂದು ಶಾಸಕರ ಹೇಳಿಕೆಗೆ ಅಕ್ಷೇಪಾ ವ್ಯಕ್ತಪಡಿಸಿದ್ದಾರೆ.20250703 190851

 ಸಂಸದ ಬಿ ವೈ ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಸಂಪೂರ್ಣ ಅನುದಾನವನ್ನು ತರುವಲ್ಲಿ ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟಿದ್ದಾರೆ. ಕೇಂದ್ರ ಸರ್ಕಾರವು ಸಂಸದರ ಮನವಿಯನ್ನು ಸಮ್ಮತಿಸಿಯೇ ಅನುದಾನ ಬಿಡುಗಡೆಗೊಳಿಸುತ್ತದೆ.ಆ ಕಾರ್ಯದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ವಹಿಸುತ್ತಿದ್ದಾರೆ.20250703 190814

 ರಾಷ್ಟ್ರೀಯ ಹೆದ್ದಾರಿಗಳು ಸಂಸದರ ಪ್ರಯತ್ನ.. ಇವರ ವಿಶೇಷ ಆಸಕ್ತಿ.. ಫಲವಾಗಿಯೇ ಇವರು ನೀಡುವ ಕಾಮಗಾರಿಗಳ ಯೋಜನಾ ವರದಿಗಳ ಉಲ್ಲೇಖದ ಆಧಾರದ ಅಣತಿಯಂತೆಯೇ ಹೆಚ್ಚು ಹೆಚ್ಚು ಅನುದಾನವನ್ನ ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತದೆ.   ಇಲ್ಲಿ ಸಂಸದರ ಪಾತ್ರವು ಮುಖ್ಯವಾಗಿದೆ, ಏಕೆಂದರೆ ಆ ಅನುದಾನವನ್ನು ತರುವಂತಹ ಸಂಸದರು ಅಷ್ಟೇ ಪ್ರಬಲವಾಗಿರಬೇಕು.. ಮತ್ತು ಅವರಿಗೆ ಕ್ಷೇತ್ರದ ಇಂಚಿಂಚು ಮಾಹಿತಿಗಳು ಅಭಿವೃದ್ಧಿಯ ಚಿಂತನೆಗಳು, ಜನಪರ ಯೋಜನೆಗಳು,  ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರಿಗೆ ಆಸಕ್ತಿ ಇರಬೇಕು. ಈ ಕಾರ್ಯದಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರು ಮುಂಚೂಣಿಯಲ್ಲಿದ್ದಾರೆ.

 ಸಿಗಂದೂರು ಸೇತುವೆ ಸಂಸದರ ವಿಶೇಷ ಆಸಕ್ತಿಯಿಂದ ನಿರ್ಮಾಣವಾಗುತ್ತಿದೆ

20250703 190659

 

 ಐತಿಹಾಸಿಕ ಸಿಗಂದೂರು ಸೇತುವೆ ದೇಶದಲ್ಲಿ ಎರಡನೇ ಉದ್ದವಾದ ಸೇತುವೆಯು ಸಹ ಸಂಸದರ ವಿಶೇಷ ಆಸಕ್ತಿಯಿಂದ ಪೂರ್ಣಗೊಳ್ಳುತ್ತಿದೆ. ಇನ್ನೊಂದು ವಿಶೇಷವೆಂದರೆ ಕೇಂದ್ರ ಸರ್ಕಾರವೇ ಈ ಇಲಾಖೆಗೆ ಒಳಪಡುವ ಎಲ್ಲಾ ಇಂಜಿನಿಯರಿಗಳಿಗೂ ಸಂಬಳವನ್ನು ನೀಡುತ್ತದೆ. ಉದಾಹರಣೆಗೆ ಕೇಂದ್ರ ಸರ್ಕಾರದಿಂದ 100 ಕೋಟಿ ಅನುದಾನ ಬಿಡುಗಡೆಯಾದರೆ 3% ಅದರಲ್ಲಿ 3 ಕೋಟಿ ರೂ ಹಣವನ್ನ ಇಂಜಿನಿಯರ್ ಗಳಿಗೆ ಸಂಬಳ ರೂಪದಲ್ಲಿ ನೀಡುತ್ತೆ.. ಕೇಂದ್ರ ಸರ್ಕಾರದ ಅನುದಾನವನ್ನೇ ರಾಜ್ಯ ಸರ್ಕಾರದ ಅನುದಾನ ಎಂದು ಹೇಳುತ್ತಾ ಅಭಿವೃದ್ಧಿಪರ ಇರುವ ಸಂಸದರ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ಶಾಸಕರು ಹೇಳಿಕೆ ಕೊಡುವುದು ಹಾಸ್ಯಾಸ್ಪದವಾಗಿದೆ.20250703 183616 1

 ಶಾಸಕರು ರಾಜ್ಯ ಸರ್ಕಾರದ ಅನುದಾನ ತರುವಲ್ಲಿ ಗಮನ ಹರಿಸಲಿ

 ಬೇಳೂರು ಗೋಪಾಲಕೃಷ್ಣ ಅವರು ಮೊದಲು ರಾಜ್ಯ ಸರ್ಕಾರದ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಲಿ..ಅವರ ರಾಜ್ಯ ಸರ್ಕಾರ ಗ್ಯಾರಂಟಿ ಆಧಾರದಲ್ಲಿ ಅಧಿಕಾರ ನಡೆಸುತ್ತಾ ಕ್ಷೇತ್ರದ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಇದರ ಬಗ್ಗೆ ತಮ್ಮ ಸರ್ಕಾರಕ್ಕೆ ಮುಖ್ಯಮಂತ್ರಿಗೆ ಹೇಳುವ ಧೈರ್ಯ ತೋರಿಸದೆ, ಸಂಸದರ ಬಗ್ಗೆ ವಿನಾಕಾರಣ ಹೇಳಿಕೆಯನ್ನ ನೀಡುತ್ತಿರುವುದನ್ನು ನಿಲ್ಲಿಸಬೇಕು ಆಗ್ರಹಿಸಿದರು.

Join WhatsApp

Join Now

Join Telegram

Join Now

Leave a Comment